ಜೋಯಿಡಾ : ತೀವ್ರವಾಗಿ ಸುರಿದ ಗಾಳಿ ಮಳೆಯಿಂದಾಗಿ ಬೃಹತ್ ಗಾತ್ರದ ಮರ ಒಂದು ದರೆಗುರುಳಿ ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಜೋಯಿಡಾ ತಾಲ್ಲೂಕಿನ ಪ್ರಧಾನಿ ಗ್ರಾಮದ ಹತ್ತಿರ ಜೋಯಿಡಾ – ದಾಂಡೇಲಿ ರಸ್ತೆಯಲ್ಲಿ ಇಂದು ಸೋಮವಾರ ಸಂಜೆ 5:30 ಗಂಟೆಗೆ ನಡೆದಿದೆ.
ಸಂಜೆ ಸುರಿದ ಭೀಕರ ಗಾಳಿ ಮಳೆಗೆ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ರಸ್ತೆ ಗುರುಳಿದ ಮರವನ್ನ ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಇಲಾಖೆಯ ಜೊತೆ ಸ್ಥಳೀಯರು ಸಹಕರಿಸುತ್ತಿದ್ದಾರೆ.