ಮೊದಲ ಹಂತದಲ್ಲಿ ದೇಶಪಾಂಡೆಯವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕಿತ್ತು- ವಿನಯ್ ದೇಸಾಯಿ

ದಾಂಡೇಲಿ : ರಾಜ್ಯದಲ್ಲೆ ಅತೀ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆಯವರಿಗೆ ಅವರ ಹಿರಿತನ, ಅನುಭವವನ್ನು ಪರಿಗಣಿಸಿ, ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲೆ ಸೇರ್ಪಡೆ ಮಾಡಬೇಕಿತ್ತು. ಆದರೆ ದೇಶಪಾಂಡೆಯವರನ್ನು ಮೊದಲ ಹಂತದಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡದಿರುವುದು ನಮಗೆಲ್ಲಾ ಅತ್ಯಂತ ನೋವು ತಂದಿದೆೆ ಎಂದು ಶನಿವಾರ ನಗರಕ್ಕೆ ಆಗಮಿಸಿದ್ದ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿಯವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾಗೆ ನೋಡಿದರೇ ಆರ್.ವಿ.ದೇಶಪಾಂಡೆಯವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿವೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ ಶ್ರೇಯಸ್ಸು ದೇಶಪಾಂಡೆಯವರಿಗಿದೆ. ದೇಶಪಾಂಡೆಯವರ ರಾಜಕೀಯ ಅನುಭವ, ಪಾರದರ್ಶಕ ಆಡಳಿತ, ಹಿರಿತನವನ್ನು ಪರಿಗಣಿಸಿ ಅವರನ್ನು ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲಿ ತೆಗೆದುಕೊಳ್ಳಬೇಕಿತ್ತು. ಅವರನ್ನು ಮೊದಲ ಹಂತದಲ್ಲಿ ಸಚಿವ ಸಂಪುಟಕ್ಕೆ ಸೇರಿಸದಿರುವುದು ನಮಗೆಲ್ಲಾ ಅತೀವ ನೋವು ತಂದಿದೆ ಎಂದು ವಿನಯ್ ದೇಸಾಯಿಯವರು ಬೇಸರ ವ್ಯಕ್ತಪಡಿಸಿದ್ದಾರೆ.[5/21/2023 9:30 AM] : ಮೊದಲ ಹಂತದಲ್ಲಿ ದೇಶಪಾಂಡೆಯವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕಿತ್ತು- ವಿನಯ್ ದೇಸಾಯಿ

ದಾಂಡೇಲಿ : ರಾಜ್ಯದಲ್ಲೆ ಅತೀ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆಯವರಿಗೆ ಅವರ ಹಿರಿತನ, ಅನುಭವವನ್ನು ಪರಿಗಣಿಸಿ, ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲೆ ಸೇರ್ಪಡೆ ಮಾಡಬೇಕಿತ್ತು. ಆದರೆ ದೇಶಪಾಂಡೆಯವರನ್ನು ಮೊದಲ ಹಂತದಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡದಿರುವುದು ನಮಗೆಲ್ಲಾ ಅತ್ಯಂತ ನೋವು ತಂದಿದೆೆ ಎಂದು ಶನಿವಾರ ನಗರಕ್ಕೆ ಆಗಮಿಸಿದ್ದ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿಯವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾಗೆ ನೋಡಿದರೇ ಆರ್.ವಿ.ದೇಶಪಾಂಡೆಯವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿವೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ ಶ್ರೇಯಸ್ಸು ದೇಶಪಾಂಡೆಯವರಿಗಿದೆ. ದೇಶಪಾಂಡೆಯವರ ರಾಜಕೀಯ ಅನುಭವ, ಪಾರದರ್ಶಕ ಆಡಳಿತ, ಹಿರಿತನವನ್ನು ಪರಿಗಣಿಸಿ ಅವರನ್ನು ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲಿ ತೆಗೆದುಕೊಳ್ಳಬೇಕಿತ್ತು. ಅವರನ್ನು ಮೊದಲ ಹಂತದಲ್ಲಿ ಸಚಿವ ಸಂಪುಟಕ್ಕೆ ಸೇರಿಸದಿರುವುದು ನಮಗೆಲ್ಲಾ ಅತೀವ ನೋವು ತಂದಿದೆ ಎಂದು ವಿನಯ್ ದೇಸಾಯಿಯವರು ಬೇಸರ ವ್ಯಕ್ತಪಡಿಸಿದ್ದಾರೆ.