ದಾಂಡೇಲಿ : ಶಾಸಕರಾದ ಆರ್.ವಿ.ದೇಶಪಾಂಡೆಯವರು ನಾಳೆಯ ಸಚಿವ ಸಂಪುಟ ಪದಗ್ರಹಣದ ಸಂದರ್ಭದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪದಗ್ರಹಣ ಹೊಂದುತ್ತಿರುವುದು ಬಹುತೇಕ ಖಚಿತವಾಗುತ್ತಿರುವ ಹಿನ್ನಲೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಈ ಬಾರಿಯೂ ಆರ್.ವಿ.ದೇಶಪಾಂಡೆಯವರಿಗೆ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಖಾತೆಯ ಜೊತೆಗೆ ಪ್ರವಾಸೋದ್ಯಮ ಖಾತೆ ಸಿಗುವ ಬಹುತೇಕ ಲಕ್ಷಣಗಳಿವೆ ಎಂಬ ಮಾತು ಕ್ಷೇತ್ರದಲ್ಲಿ ಚರ್ಚೆಯಲ್ಲಿದೆ. ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕಿನ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಬೆಳವಣಿಗೆಯನ್ನು ಕಾಣಬೇಕಾದರೆ ಆರ್.ವಿ.ದೇಶಪಾಂಡೆಯವರಿಗೆ ಕೈಗಾರಿಕಾ ಖಾತೆಯ ಜೊತೆಗೆ ಪ್ರವಾಸೋದ್ಯಮ ಖಾತೆಯು ಸಿಗಬೇಕೆಂಬುವುದು ಕ್ಷೇತ್ರದ ಜನತೆಯ ಒತ್ತಾಸೆಯಾಗಿದೆ.