Mamata Banerjee: ‘ಕೈ ಮುಗಿದು ಕೇಳ್ತೀನಿ, ಮಮತಾ ಬ್ಯಾನರ್ಜಿ ನಮ್ಮ ಚಿತ್ರ ನೋಡಲಿ’: ‘ದಿ ಕೇರಳ ಸ್ಟೋರಿ’ ನಿರ್ಮಾಪಕನ ಮನವಿ

ಇದು ಪ್ರಜಾಪ್ರಭುತ್ವ ಆದ್ದರಿಂದ ನಮ್ಮ ಭಿನ್ನಾಭಿಪ್ರಾಯವನ್ನು ನಾವು ಚರ್ಚಿಸಬಹುದು. ಇದು ನನ್ನ ವಿನಂತಿ’ ಎಂದು ವಿಪುಲ್​ ಅಮೃತ್​ಲಾಲ್​ ಶಾ ಹೇಳಿದ್ದಾರೆ.Mamata Banerjee: ‘ಕೈ ಮುಗಿದು ಕೇಳ್ತೀನಿ, ಮಮತಾ ಬ್ಯಾನರ್ಜಿ ನಮ್ಮ ಚಿತ್ರ ನೋಡಲಿ’: ‘ದಿ ಕೇರಳ ಸ್ಟೋರಿ’ ನಿರ್ಮಾಪಕನ ಮನವಿ.‘ದಿ ಕೇರಳ ಸ್ಟೋರಿ’ ಸಿನಿಮಾಗೆ ಪಶ್ಚಿಮ ಬಂಗಾಳದಲ್ಲಿ (West Bengal) ನಿಷೇಧ ಹೇರಲಾಗಿತ್ತು. ಆದರೆ ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್​ ತೀರ್ಪು ನೀಡಿದೆ. ಇದು ಚಿತ್ರತಂಡಕ್ಕೆ ಖುಷಿ ನೀಡಿದೆ. ಕೋರ್ಟ್​ನಿಂದ ತೀರ್ಪು ಪ್ರಕಟವಾದ ಬಳಿಕ ನಿರ್ಮಾಪಕ ವಿಪುಲ್​ ಅಮೃತ್​ಲಾಲ್​ ಶಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಎಎನ್​ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಅವರು ಈ ಸಿನಿಮಾವನ್ನು ಮಮತಾ ಬ್ಯಾನರ್ಜಿ (Mamata Banerjee) ನೋಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ಶೀಘ್ರದಲ್ಲೇ 200 ಕೋಟಿ ರೂಪಾಯಿ ಗಳಿಸಲಿದೆ. 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ 2ನೇ ಸ್ಥಾನದಲ್ಲಿದೆ.ವಿಪುಲ್​ ಅಮೃತ್​ಲಾಲ್​ ಶಾ ಹೇಳಿದ್ದೇನು?
‘ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಮತಾ ದೀದಿ ಅವರು ನಮ್ಮ ಈ ಸಿನಿಮಾವನ್ನು ನೋಡಲಿ. ಆಕ್ಷೇಪಾರ್ಹವಾದದ್ದು ಏನಾದರೂ ಕಂಡುಬಂದಲ್ಲಿ ನಮ್ಮೊಂದಿಗೆ ಚರ್ಚಿಸಲಿ. ನಾವು ಅವರ ಎಲ್ಲಾ ಟೀಕೆಗಳನ್ನು ಕೇಳಲು ಮತ್ತು ನಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಬಯಸುತ್ತೇವೆ. ಇದು ಪ್ರಜಾಪ್ರಭುತ್ವ ಆದ್ದರಿಂದ ನಾವು ಒಪ್ಪಬಹುದು ಅಥವಾ ಒಪ್ಪದೆಯೂ ಇರಬಹುದು. ನಮ್ಮ ಭಿನ್ನಾಭಿಪ್ರಾಯವನ್ನು ನಾವು ಚರ್ಚಿಸಬಹುದು. ಇದು ನನ್ನ ವಿನಂತಿ’ ಎಂದು ವಿಪುಲ್​ ಅಮೃತ್​ಲಾಲ್​ ಶಾ ಹೇಳಿದ್ದಾರೆ.