ಹಳಿಯಾಳ : ಶ್ರೀ.ಕ್ಷೇತ್ರ.ಧ.ಗ್ರಾ ಯೋಜನೆಯು ಪ್ರವರ್ತಿಸಲ್ಪಟ್ಟ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣಕ್ಕೆ ನೆರವಾಗಲು ಪ್ರಾರಂಭಿಸಿರುವ ಸುಜ್ಞಾನ ನಿಧಿ ಶಿಷ್ಯವೇತನವನ್ನು ಹಳಿಯಾಳ ಪಟ್ಟಣದಲ್ಲಿರುವ ಶ್ರೀ.ಕ್ಷೇತ್ರ ಧ.ಗ್ರಾ ಯೋಜನೆಯ ಕಾರ್ಯಾಲಯದ ಸಭಾ ಭವನದಲ್ಲಿ ಇಂದು ವಿತರಿಸಲಾಯ್ತು.
ಶ್ರೀ.ಕ್ಷೇತ್ರ ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರದೀಪ್.ಜಿಯವರು 23 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನವನ್ನು ವಿತರಿಸಿ ಮಾತನಾಡುತ್ತಾ, ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮದಲ್ಲಿ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣವನ್ನು ಪಡೆಯುವ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ಮಾಸಿಕ 400/- ರೂ ನಿಂದ 1000/-ರೂ ವರೆಗೆ ಅವರ ವಿದ್ಯಾಭ್ಯಾಸ ಮುಗಿಯುವ ತನಕ ಶ್ರೀ.ಕ್ಷೇತ್ರ ಧ.ಗ್ರಾ.ಯೋಜನೆಯಿಂದ ಪ್ರತಿ ತಿಂಗಳು ವಿದ್ಯಾರ್ಥಿಗಳ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಉನ್ನತಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ.ಕ್ಷೇತ್ರ ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಶ್ರೀಕಾಂತ್ ನಾಯ್ಕ, ಹಾಗೂ ಶ್ರೀ.ಕ್ಷೇತ್ರ ಧ.ಗ್ರಾ.ಯೋಜನೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.