ಸಂವಿಧಾನದ ಪ್ರಕಾರ ಕೆಲಸ ನಿರ್ವಹಿಸುತ್ತೇನೆ: ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮೊದಲ ಪ್ರತಿಕ್ರಿಯೆ

ದೆಹಲಿ: ಕೇಂದ್ರ ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು (Kiren Rijiju )ಸ್ಥಾನಕ್ಕೆ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಬಂದಿದ್ದಾರೆ. ಇದೀಗ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಮೇಘವಾಲ್, ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಪ್ರಧಾನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸಂವಿಧಾನವು (constitution) ನಮಗೆ ತಿಳಿಯಬೇಕಾದ ಎಲ್ಲವನ್ನೂ ಕಲಿಸುತ್ತದೆ. ಅದರ ಪ್ರಕಾರ ನಾನು ಕೆಲಸ ಮಾಡುತ್ತೇನೆ ಎಂದು ಅವರು ಎನ್‌ಡಿಟಿವಿಗೆ ತಿಳಿಸಿದರು ರಿಜಿಜು ಅವರ ಹಠಾತ್ ವರ್ಗಾವಣೆಯು ನ್ಯಾಯಾಂಗ ವಿಷಯಗಳಲ್ಲಿನ ಅವರ ಇತ್ತೀಚಿಗಿನ ಹೇಳಿಕೆಯಿಂದ ಎಂದು ನೀವು ಭಾವಿಸಿದ್ದಾರಾ ಎಂಬ ಪ್ರಶ್ನೆಗೆ, ಮೇಘವಾಲ್ ಅವರು ಹಾಗೇನಲ್ಲ ಎಂದು ಹೇಳಿದರು.ಈಗ ಕಾನೂನು ಸಚಿವಾಲಯದ ಸ್ವತಂತ್ರ ಉಸ್ತುವಾರಿಯನ್ನು ಹೊಂದಿರುವ ಸಂಸದೀಯ ವ್ಯವಹಾರಗಳ ಉಸ್ತುವಾರಿ ರಾಜ್ಯ ಸಚಿವರು ಆಗಿರುವ ಮೇಘವಾಲ್, ಈ ವರ್ಷದ ಕೊನೆಯಲ್ಲಿ ಅವರ ತವರು ರಾಜ್ಯವಾದ ರಾಜಸ್ಥಾನದಲ್ಲಿ ನಡೆವ ಚುನಾವಣೆಗೆ ಅವರ ನೇಮಕಾತಿ ಸಂಬಂಧವಿದೆ ಎಂಬುದನ್ನು ನಿರಾಕರಿಸಿದರು.
ಕಾರ್ಯಾಂಗ ಮತ್ತು ನ್ಯಾಯಾಂಗವು ಸೌಹಾರ್ದಯುತ ಸಂಬಂಧವನ್ನು ಹೊಂದಿದೆ. ಅದು ಸೌಹಾರ್ದಯುತ ಮತ್ತು ಸಾಂವಿಧಾನಿಕವಾಗಿ ಉಳಿಯುತ್ತದೆ. ಗಡಿಗಳು ಈಗಾಗಲೇ ಇವೆ ಎಂದಿದ್ದಾರೆ ಮೇಘವಾಲ್.
ಸರ್ಕಾರದ ಅತ್ಯಂತ ಉನ್ನತ ಮಂತ್ರಿಗಳಲ್ಲಿ ಒಬ್ಬರು ಮತ್ತು ಟ್ರಬಲ್‌ಶೂಟರ್ ಎಂದು ಕರೆಯಲ್ಪಡುವ ರಿಜಿಜು ಅವರನ್ನು ಕ್ಯಾಬಿನೆಟ್ ಸ್ಥಾನಮಾನದೊಂದಿಗೆ ಕಾನೂನು ಸಚಿವಾಲಯಕ್ಕೆ ಬಡ್ತಿ ನೀಡಿದ ಒಂದು ವರ್ಷದ ನಂತರ, ಭೂ ವಿಜ್ಞಾನ ಸಚಿವಾಲಯಕ್ಕೆ ವರ್ಗಾಯಿಸಿದ್ದಾರೆ.

ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವಿನ ಜಟಾಪಟಿ ನಡುವೆಯೇ ಈ ಬದಲಾವಣೆ ಬಂದಿದೆ. ರಿಜಿಜು ಅವರ ಸಂಕ್ಷಿಪ್ತ ಅವಧಿಯು ವಿವಾದಾಸ್ಪದವಾಗಿತ್ತು. ಏಕೆಂದರೆ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಆಗಾಗ್ಗೆ ಅವರು ನೀಡುತ್ತಿದ್ದ ಹೇಳಿಕೆ ಮತ್ತು ಸುಪ್ರೀಂಕೋರ್ಟ್ ಗೆ ನ್ಯಾಯಾಧೀಶರನ್ನು ನೇಮಿಸುವ ನ್ಯಾಯಾಧೀಶರ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಅವರು ಟೀಕೆ ವ್ಯಕ್ತ ಪಡಿಸಿದ್ದರು