ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರು(HD Deve Gowda) ಮಣ್ಣಿನ ಮಗ ಎಂದೆ ಪ್ರಖ್ಯಾತಿ. ರೈತರ ಅಳುವಿಗೆ ಧ್ವನಿ ಕೊಟ್ಟ ನೇಕಾರ, ಹೌದು ಒಂದು ಸಣ್ಣ ಹಳ್ಳಿಯಿಂದ ದೇಶದ ಅತ್ಯುನ್ನತ ಸ್ಥಾನವನ್ನ ಅಲಂಕರಿಸುವ ಮಟ್ಟಕ್ಕೆ ಬೆಳೆದಿರುವ ನಾಯಕ. ಇಂದು(ಮೇ 18) ಅವರು 91ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೆಚ್.ಡಿ.ದೇವೇಗೌಡರ ಅವರು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಸುಧಾರಕರು ಹಾಗೂ ಭಾರತದ ಭವ್ಯ ಸಂಸ್ಕಂತಿ ಪರಂಪರೆಯ ಪ್ರಶಂಸಕರು. ಇವರು ಮೇ 18, 1933ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂದ ಡಿಪ್ಲೊಮಾ ಪಡೆದಿರುವ ಶ್ರೀ ದೇವೇಗೌಡರು 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು.
ದೇಶದ ಪ್ರಧಾನಿಯಾಗುವ ಮೂಲಕ ಕರ್ನಾಟಕದ ಕೀರ್ತಿಯನ್ನ ದೇಶಕ್ಕೆ ಪರಿಚಯಿಸಿದ್ದ ದೇವೇಗೌಡರು. ಮುಖ್ಯಮಂತ್ರಿಯಾಗಿ, ಸಚಿವರಾಗಿ, ಶಾಸಕನಾಗಿ, ಸಂಸದನಾಗಿ, ರೈತ ನಾಯಕನಾಗಿ, ಹೋರಾಟಗಾರನಾಗಿ ಅವರು ಮಾಡಿರುವ ಸೇವೆ ಅಸಂಖ್ಯಾತ. ಕೆಂಪುಕೋಟೆಯಲ್ಲಿ ಪ್ರಧಾನಿಯಾಗಿ ರಾಷ್ಟ್ರಧ್ವಜ ಹಾರಿಸಿದ ಮೊದಲ ಮತ್ತು ಸದ್ಯದ ಏಕೈಕ ಕನ್ನಡಿಗ ಹೆಚ್ಡಿ ದೇವೇಗೌಡ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ದಿನ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ದೇಶಕಂಡ ಮಣ್ಣಿನ ಮಗನಿಗೆ ಹಲವು ರಾಜಕಾರಣಿಗಳ ಶುಭಾಶಯಗಳ ಮಹಾಪೂರ
ಶುಭಾಶಯ ಕೋರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವಿಟ್ ಮೂಲಕ ಮಾಜಿ ಪ್ರಧಾನಿ ಮಂತ್ರಿ ಹೆಚ್ಡಿ ದೇವೇಗೌಡ ಅವರಿಗೆ ಶುಭಾಶಯ ಕೋರಿದ್ದಾರೆ ‘ದೇಶಕ್ಕೆ ನಿಮ್ಮ ಕೊಡುಗೆ ಅಪಾರ, ಆರೋಗ್ಯದಿಂದ ಇನ್ನು ಹೆಚ್ಚು ಕಾಲ ಬದುಕಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.