ಇಸ್ಪೀಟ್‌ ದಂಧೆಗೆ ಕುಮ್ಮಕ್ಕು ಆರೋಪದಲ್ಲಿ ನಗರಸಭೆ ಸದಸ್ಯನ ಗಡಿಪಾರು-ಆದೇಶ ವಾಪಸ್‌ ಪಡೆಯುವಂತೆ ಬೆಂಬಲಿಗರ ಆಕ್ರೋಶ.

ಬೆಂಗಳೂರ ಗ್ರಾಮಾಂತರ: ವಿಧಾನಸಭೆ ಮತತಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ.ಪೋಲಿಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು,ಕೆಲವರನ್ನು ಗಡಿಪಾರು ಸಹ ಮಾಡಿದ್ದಾರೆ.ಅದೇ ರೀತಿ ಇಲ್ಲೋಬ್ಬ ನಗರಸಭೆ ಸದಸ್ಯನನ್ನು ಸಹ ಗಡಿಪಾರು ಮಾಡಿದ್ದು,ಇದೀಗ ಜನಪ್ರತಿನಿಧಿಯ ಗಡಿಪಾರಿನ ವಿರುದ್ಧ ರೊಚ್ಚಿಗೆದ್ದ ಜನರು ಪ್ರತಿಭಟನೆ ನೆಡೆಸುವ ಮೂಲಕ ಆಕ್ರೋಶ ಹೊರ ಹಾಕಿರುವ ಘಟನೆ ನೆಡೆದಿದೆ.


‌ ಮತದಾನದ ದಿನ ಸಮೀಪಿಸುತ್ತಿರುವ ಹಿನ್ನೆಲೆ ಎಲ್ಲೆಡೆ ಪೋಲಿಸ್ರು ಅಲರ್ಟ್‌ ಆಗಿದ್ದು, ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ ಕೋಮು ಗಲಬೆ, ಶಾಂತಿ ಕದುಡುವಂತಹ ಪ್ರತಿಭಟನೆ ಧರಣಿಗಳಿಗೂ ಬ್ರೇಕ್‌ ಹಾಕಿದ್ದು, ಎಲ್ಲೆಡೆ ಪುಲ್‌ ಟೈಟ್‌ ಮಾಡಿದ್ದಾರೆ.ಆದ್ರೆ ಈ ನಡುವೆ ಇಲ್ಲೊಂದು ಗ್ರಾಮದಲ್ಲಿ ಜನರು ಪೋಲಿಸರ ವಿರುದ್ಧ ಪ್ರತಿಭಟನೆ ನೆಡಸಿ ಜನಪ್ರತಿನಿಧಿಗಾಗಿ ಪಟ್ಟು ಹಿಡಿದಿದ್ದಾರೆ.


ಹೌದು ಜಿಲ್ಲೆಯ ಚಿಕ್ಕಬಳ್ಳಾಪುರ ನಗರದ ಮುತ್ತೂರು ವಾರ್ಡ್‌ನಿಂದ ಕಳೆದ ನಗರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ವಾರ್ಡ್‌ನ ಸದಸ್ಯ ಮುನಿರಾಜು ಅಲಿಯಾಸ್‌ ಚಿಕ್ಕಪ್ಪಿಯನ್ನು ಚುನಾವಣಾ ಸಂದರ್ಭದಲ್ಲಿ ಪೋಲಿಸರು ಏಕಾಏಕಿ ಗಡಿಪಾರು ಮಾಡಿದ್ದಾರೆ. ಚುನಾವಣಾ ವೇಳೆ ನಗರಸಭೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತೆ ಸದಸ್ಯ ಜೂಜಿಗೆ ಕುಮ್ಮಕ್ಕು ನೀಡುತ್ತಿದ್ದಾನೆ ಎಂದು ದೊಡ್ಡಬಳ್ಳಾಪುರ ಪೋಲಿಸರು ಚುನಾವಣಾಧಿಕಾರಿಗಳಿಗೆ ವರದಿ ನೀಡಿದ್ದಾರಂತೆ. ಹೀಗಾಗಿ ಮುತ್ತೂರು ವಾರ್ಡ್‌ ಸದಸ್ಯ ಮುನಿರಾಜುನನ್ನು ಜೂಜು ಆಡಲು ಸಹಕಾರದ ಆರೋಪದ ಮೇಲೆ ಒಂದು ತಿಂಗಳು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ. ಏಕಾಏಕಿ ಗಡಿಪಾರು ಮಾಡಿರುವ ಪೋಲಿಸರ ಹಾಗೂ ಚುನಾವಣಾಧಿಕಾರಿಗಳ ವಿರುದ್ಧ ಬೇಸತ್ತ ಗ್ರಾಮಸ್ಥರು ಆದೇಶ ವಾಪಸ್‌ ಪಡೆಯುವಂತೆ ಪಟ್ಟು ಹಿಡಿದಿದ್ದಾರೆ