ಮೇ 18ರಂದು ವಿಶ್ವ ಏಡ್ಸ್ ಲಸಿಕೆ ದಿನ ಆಚರಿಸಲಾಗುತ್ತದೆ. ಏಡ್ಸ್ ತಡೆಗಟ್ಟುವಲ್ಲಿ ಲಸಿಕೆಯ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಇಂದು ಮಾಡಲಾಗುತ್ತದೆ.
ರಕ್ತ ಹಾಗೂ ದೈಹಿಕ ಸಂಪರ್ಕದಿಂದ ಏಡ್ಸ್ ಹರಡುತ್ತದೆ. ಎರಡು ದಶಕಗಳ ಹಿಂದೆ ಏಡ್ಸ್ ಇಡೀ ವಿಶ್ವವನ್ನೇ ನಡುಗಿಸಿತ್ತು. WHO ಪ್ರಕಾರ, HIV ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿದೆ, ಇದುವರೆಗೆ 40.1 ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಂಡಿದೆ. 2021 ರ ಅಂತ್ಯದ ವೇಳೆಗೆ ಅಂದಾಜು 38.4 ಮಿಲಿಯನ್ ಜನರು HIV ಯಿಂದ ಬಳಲುತ್ತಿದ್ದರು. ಅವರಲ್ಲಿ ಮೂರನೇ ಎರಡರಷ್ಟು ಅಂದರೆ 25.6 ಮಿಲಿಯನ್ ಜನರು WHO ಆಫ್ರಿಕನ್ ಪ್ರದೇಶದಲ್ಲಿದ್ದಾರೆ.
ಏಡ್ಸ್ ಲಸಿಕೆಯು ಎಚ್‌ಐವಿ ಸೋಂಕು ಇತರರಿಗೆ ಹರಡದಂತೆ ತಡೆಯುತ್ತದೆ. ಈ ದಿನದಂದು ಏಡ್ಸ್ ರೋಗದ ವಿರುದ್ಧ ಹೋರಾಡುವ ಸಂಘ ಸಂಸ್ಥೆಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಸ್ವಯಂ ಸೇವಕರಿಗೆ ಧನ್ಯವಾದ ಅರ್ಪಿಸುವ ದಿನ. ಹಾಗೂ ಏಡ್ಸ್ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಜೀವನವನ್ನು ಮೀಸಲಿಟ್ಟ ವೈದ್ಯಕೀಯ ತಜ್ಞರು, ವಿಜ್ಞಾನಿಗಳು, ಸ್ವಯಂ ಸೇವಕರು ಹಾಗೂ ಬೆಂಬಲಿಗರಿಗೆ ಈ ದಿನದ ಆಚರಣೆಯ ಮೂಲಕ ಧನ್ಯವಾದ ಹೇಳಲಾಗುತ್ತದೆWorld AIDS Vaccine Day 2023: ವಿಶ್ವವನ್ನೇ ನಡುಗಿಸಿದ್ದ ಏಡ್ಸ್ ಲಸಿಕೆ ದಿನ ಇಂದು, ಇಲ್ಲಿದೆ ಇತಿಹಾಸ, ಮಹತ್ವ
ಇಡೀ ವಿಶ್ವವನ್ನೇ ನಡುಗಿಸಿದ್ದ ಏಡ್ಸ್ ಎಂಬ ಮಹಾಮಾರಿ ಕಾಯಿಲೆಗೆ 1988ರಲ್ಲಿ ಮೊದಲ ಬಾರಿಗೆ ಲಸಿಕೆಯನ್ನು ಕಂಡುಹಿಡಿಯಲಾಗಿತ್ತು(World AIDS Vaccine Day 2023). ಅಲ್ಲಿಂದ ಪ್ರತಿವರ್ಷ ವಿಶ್ವದಾದ್ಯಂತ ಮೇ 18ರಂದು ವಿಶ್ವ ಏಡ್ಸ್ ಲಸಿಕಾ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವು ಎಚ್‌ಐವಿ/ಏಡ್ಸ್(HIV/AIDS) ಲಸಿಕೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಏಡ್ಸ್ ಲಸಿಕೆಯ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ.
ಇತಿಹಾಸ
ಮೇ 18, 1988 ರಂದು, ಪ್ರಪಂಚದಾದ್ಯಂತ ಜನರು ಮೊದಲ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಿದರು. 1987ರಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಏಡ್ಸ್ ಲಸಿಕೆ ಬಗ್ಗೆ ಭಾಷಣ ಮಾಡಿದ್ದರು. ಭಾಷಣದಿಂದ ಸ್ಫೂರ್ತಿಗೊಂಡು ಲಸಿಕೆ ಕಂಡು ಹಿಡಿಯುವ ಕೆಲಸ ಆರಂಭವಾಗಿತ್ತು. ಈ ಭಾಷಣದಲ್ಲಿ ಕ್ಲಿಂಟನ್ ಈ ಭಯಾನಕ ರೋಗ ನಿರ್ಮೂಲನೆಗೆ ವ್ಯಾಕ್ಸಿನೇಷನ್ ಅಗತ್ಯವನ್ನು ಒತ್ತಿ ಹೇಳಿದ್ದರು. ಅಲ್ಲದೆ, ಅವರು ಲಸಿಕೆಯನ್ನು ತಯಾರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವುದರ ಪ್ರಾಮುಖ್ಯತೆಯ ಕುರಿತು ವಿವರಿಸಿದ್ದರು.
ಏಡ್ಸ್ ಲಸಿಕೆ ಮಹತ್ವ
ಈ ದಿನದ ಮಹತ್ವವೆಂದರೆ ಎಚ್‌ಐವಿ ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಎಲ್ಲ ಜನರಲ್ಲಿ ಅರಿವು ಮೂಡಿಸುವುದು, ಏಡ್ಸ್ ನಿರ್ಮೂಲನೆಯ ಕುರಿತು ಜಾಗೃತಿ ಮೂಡಿಸುವುದು, ಸಂದೇಶಗಳನ್ನು ಪ್ರಸಾರ ಮಾಡುವುದು, ಶಿಕ್ಷಣವನ್ನು ಸಾರುವುದು, ಸಂಶೋಧಕರನ್ನು ಪ್ರೋತ್ಸಾಹಿಸುವುದು ಮತ್ತು ಜನರು ಈ ಉದಾತ್ತ ಉದ್ದೇಶದಲ್ಲಿ ತೊಡಗಿಸಿಕೊಳ್ಳುವುದನ್ನು ಖಾತ್ರಿಪಡಿಸುವ ಪ್ರಾಥಮಿಕ ಗುರಿಯೊಂದಿಗೆ ವಿಶ್ವ ಏಡ್ಸ್ ಲಸಿಕೆ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.