ಕೃಷಿ ಇಲಾಖೆ, ಪೊಲೀಸ್ ಇಲಾಖೆಯ ಜಂಟಿ ಕಾರ್ಯಚರಣೆಯಲ್ಲಿ ಸಿಕ್ತು ಅಪಾರ ಪ್ರಮಾಣದ ಕಳಪೆ ರಸಗೊಬ್ಬರ

ಮೈಸೂರು: ರೈತ ದೇಶದ ಬೆನ್ನೆಲುಬು, ಕೃಷಿಗೆ ಅವಶ್ಯಕವಾಗಿರುವ ನೀರು, ರಸಗೊಬ್ಬರ ಹಾಗೂ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿದ್ರೆ, ರೈತನ ಬಾಳು ಹಸನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಸಂದರ್ಭದಲ್ಲಿ ಅನ್ನ ಕೊಡುವ ರೈತನಿಗೆ ಕಳಪೆ ರಸಗೊಬ್ಬರ(Low grade Fertilizer) ಮಾರಾಟ ಮಾಡಿದ ಆರೋಪ ಮೈಸೂರಿನ ಮೇಟಗಳ್ಳಿಯಲ್ಲಿ ಕೇಳಿಬಂದಿದೆ. ಈ ಹಿನ್ನಲೆ ಕಳಪೆ ರಸಗೊಬ್ಬರ ಮಾರಾಟ ಕೇಂದ್ರದ ಮೇಲೆ ಕೃಷಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ದಾಳಿ ಮಾಡಿದ್ದು, ಮಾರಾಟ ಕೇಂದ್ರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಕಳಪೆ ರಸಗೊಬ್ಬರ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.