ನವದೆಹಲಿ ಬೆಳಗ್ಗೆ 11 ಗಂಟೆಗೆ ಫೈನಲ್ ಮೀಟಿಂಗ್
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪಟ್ಟುಬಿಡದೆ ಹಠ ಹಿಡಿದಿದ್ದು ಈ ಬಗ್ಗೆ ತೀರ್ಮಾನಿಸಲು ನವದೆಹಲಿಯಲ್ಲಿ ಬೆಳಗ್ಗೆ 11 ಗಂಟೆಗೆ ಫೈನಲ್ ಮೀಟಿಂಗ್ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
Karnataka Government Formation Live News Updates Today:ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಗದ್ದುಗೆಗಾಗಿ ಜಟಾಪಟಿ ನಡೆಯುತ್ತಿದೆ. ಅತ್ತ ದೆಹಲಿಯಲ್ಲಿ ಸಿಎಂ ಸ್ಥಾನದ ಜಟಾಪಟಿ ನಡೀತಿದ್ರೆ, ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ ಬೆಂಬಲಿಗರು, ಸಿದ್ದು ಸಿಎಂ ಕೂಗು ಎಬ್ಬಿಸಿದ್ದಾರೆ. ಇದ್ರ ಜೊತೆಗೆ ಡಿಸಿಎಂ ಪಟ್ಟಕ್ಕಾಗಿಯೂ ಕೂಡಾ ನಾಯಕರ ಬೆಂಬಲಿಗರು ಒತ್ತಡ ತಂತ್ರ ಅನುಸರಿಸೋಕೆ ಶುರು ಮಾಡಿದ್ದಾರೆ. ಬಹುಮತದಿಂದ ಗೆದ್ದು ಬೀಗಿದ ಕಾಂಗ್ರೆಸ್ ಆಡಳಿತ ಶುರು ಮಾಡುವಲ್ಲಿ ವಿಳಂಬ ಮಾಡುತ್ತಿದೆ. ಪಕ್ಷದೊಳಗಿರುವ ಜಗಳ ಆಚೆ ತೋರಿಸುತ್ತಿದೆ. ಇದರಿಂದ ಜನರಲ್ಲಿಯೂ ಕಾಂಗ್ರೆಸ್ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗುತ್ತಿದೆ. ಮತ್ತೊಂದೆಡೆ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತುಕಥೆ ನಡೆಸಿ ಸಿಎಂ ಸ್ಥಾನ ಅಂತಿಮಕ್ಕೆ ಕಸರತ್ತು ಮಾಡುತ್ತಿದ್ದಾರೆ. ಸದ್ಯ ಈಗ ಗದ್ದುಗೆ ಕಗ್ಗಂಟು ಬಗೆ ಹರಿಸೋಕೆ ಕಾಂಗ್ರೆಸ್ ಹೈಕಮಾಂಡ್ 30:30 ಸೂತ್ರ ಉಪಯೋಗಿಸಲು ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಡಿಕೆ ಶಿವಕುಮಾರ್ ಒಪ್ಪುತ್ತಿಲ್ಲ. ಸದ್ಯ ಮಧ್ಯಾಹ್ನ ಸಭೆ ನಡೆಸಿ ಸಿಎಂ ಘೋಷಣೆ ಮಾಡುವ ಸಾಧ್ಯತೆ ಇದೆ.