ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಲ್ಲಿ ಪಂಪ್ ರಿಪೇರಿಗೆಂದು ಬಾವಿಗಿಳಿದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಶಿರಸಿಯ ಯಲ್ಲಾಪುರ ನಾಕೆಯ ಗೋವಿಂದ ಸೋಮಯ್ಯ ಪೂಜಾರಿ (60) ಎಂಬವರು ಬಾವಿಯಲ್ಲಿದ್ದ ಪಂಪ್ ರಿಪೇರಿಗೆ ಇಳಿದ ವೇಳೆ ಆಕಸ್ಮಿವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರನ್ನು ರಕ್ಷಿಸಲು ಮಾವಿನಕಟ್ಟಾದ ಗಣೇಶ ರಾಮದಾಸ ಶೇಟ್ (23) ಹಾಗೂ ಸುರೇಶ ನಾಯರ್ (40) ನೀರಗಿಳಿದಿದ್ದು, ಅವರೂ ಮುಳುಗಿ ಮೃತಪಟ್ಟಿದ್ದಾರೆ.
ಸಿಪಿಐ ರಂಗನಾಥ ನೀಲಮ್ಮನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಶವಗಳನ್ನು ಮೇಲಕ್ಕೆತ್ತಲು ಕ್ರಮ ಕೈಗೊಂಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.