ವಿಧಾನಸಭೆ ಚುನಾವಣೆಗೆ ವಿಶೇಷ ರೈಲು, ಹೆಚ್ಚುವರಿ ಕೋಚ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ ಇದೆ. ಮತದಾನಕ್ಕೆ ಊರುಗಳಿಗೆ ತೆರಳುವವರಿಗಾಗಿ ನೈಋತ್ಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಘೋಷಿಸಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್ಗಳನ್ನು ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. ಬೆಂಗಳೂರು ಹಾಗೂ ಬೆಳಗಾವಿ ಮಧ್ಯೆ ಒಂದು ವಿಶೇಷ ರೈಲು ಸಂಚರಿಸಲಿವೆ. ಹುಬ್ಬಳ್ಳಿ ಮಾರ್ಗವಾಗಿ ಈ ರೈಲು ಸಂಚರಿಸಲಿವೆ.

ಇನ್ನು ಬೆಂಗಳೂರಿನಿಂದ ಬೀದರ್ಗೆ ಕಲಬುರಗಿ ಮಾರ್ಗವಾಗಿ ಒಂದು ರೈಲು ತೆರಳಲಿದೆ. ಬೆಂಗಳೂರಿನಿಂದ (ಯಶವಂತಪುರ) ಮುರುಡೇಶ್ವರಕ್ಕೆವಿಶೇಷ ರೈಲು ಸಂಚರಿಸಲಿದೆ.ಇಷ್ಟೇ ಅಲ್ಲದೆ, ಕೆಲವು ರೈಲುಗಳಿಗೆ ಹೆಚ್ಚುವರಿ ಕೋಚ್ಗಳನ್ನು ಅಳವಡಿಸಲಾಗಿದೆ. 12079/80 ಬೆಂಗಳೂರು-ಹುಬ್ಬಳ್ಳಿ ಜನಶತಾಬ್ಧಿ ಎಕ್ಸ್ಪ್ರೆಸ್ಗೆ ಎರಡು ಹೆಚ್ಚುವರಿ ಕೋಚ್ಗಳು, 17307/ 17308 ಬಾಗಲಕೋಟೆ, ಮೈಸೂರು, ಬಸವ ಎಕ್ಸ್ಪ್ರೆಸ್ಗೆ ಹಾಗೂ 16593/94 ಬೆಂಗಳೂರು ನಾಂದೇಡ್ ವಯಾ ರಾಯಚೂರು, ಯಾದಗಿರಿ ರೈಲಿಗೆ ತಲಾ ಒಂದು ಕೋಚ್ ಸೇರಿಸಲಾಗುತ್ತಿದೆ.

ಬೆಂಗಳೂರು-ಕಾರವಾರ ಮಧ್ಯೆ ಸಂಚರಿಸುವ 16595/96 ಸಂಖ್ಯೆಯ ರೈಲಿಗೂ ಹೆಚ್ಚುವರಿ ಕೋಚ್ ಅಳವಡಿಸಲಾಗುತ್ತಿದೆ.ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಬೆಂಗಳೂರಿನಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳುವ ಖಾಸಗಿ ಬಸ್‌ಗಳು ಭಾರೀ ದರ ಹೆಚ್ಚಳ ಮಾಡಿವೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಬಸ್ ದರ 800 ರೂ. ಇತ್ತು, ಈಗ 1800ಕ್ಕೆ ಏರಿಕೆಯಾಗಿದೆ. ಅದೇ ರೀತಿ 950ರೂ. ಇದ್ದ ಮಂಗಳೂರು ಟಿಕೆಟ್ ದರ ಇದೀಗ 2200ರೂ. ಆಗಿದೆ. ಇದೇ ರೀತಿ ಹಲವು ಊರುಗಳಿಗೆ ತೆರಳುವ ಬಸ್ಗಳ ದರ ದುಪ್ಪಟ್ಟಾಗಿವೆ. ಇದೇ ಸಂದರ್ಭದಲ್ಲಿ ವಿಶೇಷ ರೈಲು ಬಿಟ್ಟಿರುವುದು ಅನೇಕ ಮಂದಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ