ಅಮೆರಿಕಾದಲ್ಲಿ ನಡೆದ ಶೂಟೌಟ್ ನಲ್ಲಿ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿ ಸಾವು

ಅಮೆರಿಕ: ಚಿಕಾಗೋದಲ್ಲಿ ಶೂಟೌಟ್ ನಡೆದಿದ್ದು, ಈ ಘಟನೆಯಲ್ಲಿ ಆಂಧ್ರಪ್ರದೇಶದ ವಿಜಯವಾಡ ಮೂಲದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ದೇವಾಂಶು ಮೃತ ವಿದ್ಯಾರ್ಥಿ.

ಸ್ನೇಹಿತ ಸಾಯಿ ಚರಣ್​ನೊಂದಿಗೆ ವಾಲ್​ಮಾರ್ಟ್​​ಗೆ ಹೋಗುತ್ತಿದ್ದ ವೇಳೆ ಹಂತಕರು ಗನ್ ತೋರಿಸಿ ಹುಡುಗರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅದನ್ನು ನಿರಾಕರಿಸಿದಾಗ ದೇವಾಂಶು ಮೇಲೆ ಹಂತಕರು ಶೂಟ್​ ಮಾಡಿದ್ದಾರೆ. ಹಂತಕರ ಗುಂಡೇಟಿಗೆ ದೇವಾಂಶು ಅಸುನೀಗಿದ್ದಾನೆ. ಇನ್ನೂ ಈತನ ಸ್ನೇಹಿತ ಸಾಯಿ ಚರಣ್​ಗೆ ಗಾಯವಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.