ನವದೆಹಲಿ: ದೆಹಲಿಯ ರಾಷ್ಟ್ರ ರಾಜಧಾನಿ ವಲಯದಲ್ಲಿ ಭೂಕಂಪನ ಉಂಟಾಗಿರುವ ಘಟನೆ ನಡೆದಿದೆ. ಸುಮಾರು 30 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.
ಈ ಭಾಗದ ಜನರು ಹೆದರಿ ಕಟ್ಟಡಗಳಿಂದ ಹೊರಬಂದಿದ್ದು, ಎಲ್ಲರಲ್ಲೂ ಆತಂಕ ಉಂಟಾಗಿತ್ತು.
ಉತ್ತರಾಖಂಡ, ನೇಪಾಳದಲ್ಲಿ ಭೂಕಂಪ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.