ಕೇರಳ: ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಕರಜ್ಯೋತಿ ಮೂಡುವ ಮೂಲಕ ಭಕ್ತ ಸಾಗರಕ್ಕೆ ಮಣಿಕಂಠ ಸ್ವಾಮಿ ದರ್ಶನ ನೀಡಿದ್ದಾನೆ.
ಅಯ್ಯಪ್ಪನ ದರ್ಶನದ ಜೊತೆಗೆ ಮಕರಜ್ಯೋತಿ ದರ್ಶನವನ್ನು ಅಯ್ಯಪ್ಪ ಸ್ವಾಮಿ ಭಕ್ತರು ಕಣ್ತುಂಬಿಕೊಂಡರು. ಇದು ಭಕ್ತಕೋಟಿಗೆ ಒಂದು ಪುಣ್ಯ ಕಾಲ, ಈ ಕ್ಷಣಕ್ಕಾಗಿ ಶ್ರದ್ಧೆ, ಭಕ್ತಿಯಿಂದ ಕಾಯುತ್ತಿದ್ದ ಮಾಲಾಧಾರಿಗಳಿಗೆ ದೇವರೇ ಒಂದು ಬಾರಿ ದರ್ಶನ ನೀಡುವ ಕ್ಷಣ ಇದಾಗಿದೆ.
ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂರು ಬಾರಿ ಮಕರಜ್ಯೋತಿ ಮೂಡುತ್ತದೆ. ಮೂಡುವುದು ಮೂಡುವುದು ಮಕರಜ್ಯೋತಿ ಎನ್ನುವ ಹಾಡಿನ ಮೂಲಕ ಭಕ್ತರು ಜ್ಯೋತಿಯನ್ನು ಕಣ್ತುಂಬಿಕೊಳ್ಳತ್ತಾರೆ. ಸ್ವಾಮಿಯೇ ಅಯ್ಯಪ್ಪ ಎನ್ನುವ ಮಂತ್ರ ಘೋಷಣೆ ಮೂಲಕ ಈ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.