ರಾಯಚೂರು: ಕೆಲಸ ಮಾಡುತ್ತಿರುವ ವೇಳೆ ಆಯತಪ್ಪಿ ಮೇಲಿಂದ ಕೆಳಕ್ಕೆ ಬಿದ್ದ ಮೂವರು ಕಾರ್ಮಿಕರ ಪರಿಸ್ಥಿತಿ ಗಂಭೀರವಾಗಿರುವಂತಹ ಘಟನೆ ಜಿಲ್ಲೆಯ ವಿದ್ಯುತ್ ಉತ್ಪಾದನಾ ಘಟಕದ ಆರ್ಟಿಪಿಎಸ್ನಲ್ಲಿ ಸಂಭವಿಸಿದೆ. ಸೋನುಕುಮಾರ್ (28), ಮಹದೇವ (32), ರಾಮಪ್ರೀತ್(29) ಗಂಭೀರವಾಗಿ ಗಾಯಗೊಂಡ ಕಾರ್ಮಿಕರು.
ಸುಮಾರು 50 ಮೀ ಎತ್ತರದಲ್ಲಿ ಸ್ಕ್ರ್ಯಾಬ್ ಕಟಿಂಗ್ ಕೆಲಸ ಮಾಡುವಾಗ ಆಯತಪ್ಪಿ ಕೆಳಗೆಬಿದ್ದು ದುರ್ಘಟನೆ ಸಂಭಸಿದೆ. ಸದ್ಯ ಗಾಯಾಳುಗಳನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶಕ್ತಿನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇನ್ನು ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ 7ನೇ ಘಟಕದ ಎಚ್. ಟಿ. 6.6 ಕೆ. ವಿ. ಪ್ಯಾನಲ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕದ ಯು. ಸಿ.ಬಿ. ಸ್ವಿಚ್ ಗೇರ್ ಸುಟ್ಟು ಕರಕಲಾಗಿದ್ದು, ಒಂದು ವಾರ ಕಾಲ ವಿದ್ಯುತ್ ಉತ್ಪಾದನೆಯನ್ನ ಸ್ಥಗಿತ ಮಾಡಲಾಗಿದೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.