ನವದೆಹಲಿ: ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಎಂದೇ ಕರೆಯಲಾಗುವ ಸಿಯಾಚಿನ್‌ನಲ್ಲಿ ಮೊದಲ ಬಾರಿಗೆ ಭಾರತೀಯ ಸೇನೆಯು ಮಹಿಳಾ ಅಧಿಕಾರಿಯನ್ನು ನಿಯೋಜನೆ ಮಾಡಿದೆ. ಕಾರ್ಪ್ಸ್ ಆಫ್ ಎಂಜಿನಿಯರ್ಸ್‌ನ ಕ್ಯಾಪ್ಟನ್ ಶಿವಾ ಚೌಹಾನ್ ರನ್ನು, 15,600 ಅಡಿ ಎತ್ತರದಲ್ಲಿರುವ ಕುಮಾರ್ ಪೋಸ್ಟ್‌ನಲ್ಲಿ ನಿಯೋಜನೆ ಮಾಡಲಾಗಿದೆ.
‘ಮೂರು ತಿಂಗಳು ಕಾಲ ಕಠಿಣ ತರಬೇತಿ ನೀಡಿದ ನಂತರ ಕ್ಯಾಪ್ಟನ್ ಚೌಹಾನ್ ಅವರನ್ನು ಸಿಯಾಚಿನ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.