ಫಿಫಾ ವಿಶ್ವಕಪ್ 2022: ಫೈನಲ್ಸ್ ಗೆ ಲಗ್ಗೆ ಇಟ್ಟ ಅರ್ಜೆಂಟಿನಾ.!

ಕತಾರ್‌: ದೋಹಾದಲ್ಲಿ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಫಿಫಾ ವಿಶ್ವಕಪ್ 2022 ರ ಫೈನಲ್‌ ಪ್ರವೇಶಿಸಿದೆ.

ಕ್ರೊವೇಶಿಯಾ ತಂಡವನ್ನು ಅರ್ಜೆಂಟಿನಾ ತಂಡ 3–0 ಗೋಲುಗಳ ಅಂತರದಿಂದ ಮಣಿಸಿದೆ. ಬುಧವಾರ ನಡೆಯಲಿರುವ ಫ್ರಾನ್ಸ್ ಮತ್ತು ಮೊರಕ್ಕೊ ನಡುವಣ ಪಂದ್ಯದಲ್ಲಿ ವಿಜೇತರಾಗುವ ತಂಡ ಫೈನಲ್‌ನಲ್ಲಿ ಅರ್ಜೆಂಟಿನಾ ವಿರುದ್ಧ ಪಂದ್ಯಾಟವಾಡಲಿದೆ.

ಅರ್ಜೆಂಟಿನಾ ತಂಡದ ಆಟಗಾರ ಜೂಲಿಯನ್ ಅಲ್ವಾರೇಜ್ 2 ಗೋಲು ಬಾರಿಸಿದರೆ, ಮೆಸ್ಸಿ ಒಂದು ಗೋಲು ಬಾರಿಸಿದ್ದಾರೆ. ಈ ಮೂಲಕ ಅರ್ಜೆಂಟಿನಾ ತಂಡ 6 ನೇ ಬಾರಿಗೆ ಫಿಫಾ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.