ಬೆಂಗಳೂರು: ರಾಜಧಾನಿಯ ಸಿ.ವಿ.ರಾಮನ್ನಗರ ಕ್ಷೇತ್ರದ ಹಳೇ ಮದ್ರಾಸ್ ರಸ್ತೆಗೆ ದೇಶದಲ್ಲೇ ಮೊದಲ ಬಾರಿಗೆ ಬಿಬಿಎಂಪಿ ಹೊಸತನದ ಟಚ್ ನೀಡಿದೆ. ವೈಟ್ ಟಾಪಿಂಗ್ ಬದಲು ರ್‍ಯಾಪಿಡ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಡಿ. 8 ರಂದು ಉದ್ಘಾಟಿಸಿದ್ದಾರೆ.
ವೈಟ್ ಟಾಪಿಂಗ್ ರಸ್ತೆಗೆ ಬಹಳಷ್ಟು ಟ್ರಾಫಿಕ್ ಉಂಟಾಗುತ್ತಿದ್ದು, ರಿಪೇರಿ ಇದ್ದಾಗಲೂ ಕೆಲಸ ಮಾಡುವುದು ದೊಡ್ಡ ಸವಾಲಾಗಿತ್ತು. ಹೊಸ ಟೆಕ್ನಾಲಜಿ ಮೂಲಕ ರ್‍ಯಾಪಿಡ್ ರೋಡ್ ಮಾಡಲಾಗಿದೆ. ಯನ್ನು ಪ್ರಾಯೋಗಿಕವಾಗಿ 300 ಮೀ. ರ್‍ಯಾಪಿಡ್ ರಸ್ತೆ ನಿರ್ಮಿಸಲಾಗಿದ್ದು, 20 ಟನ್ ಗೂ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಭಾರತದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ರ್‍ಯಾಪಿಡ್ ರಸ್ತೆ ನಿರ್ಮಿಸಲಾಗಿದ್ದು, ಕೇವಲ ಹತ್ತು ದಿನಗಳಲ್ಲಿ ರಸ್ತೆ ಕಂಪ್ಲೀಟ್ ಆಗಿ ಜನರಿಗೆ ಸೇವೆ ಕೊಡಲು ತಯಾರಾಗಿದೆ. ಈ ರಸ್ತೆಯನ್ನು ಕೇವಲ ಹದಿನೈದು ದಿನಗಳ ಒಳಗೆ ನಿರ್ಮಿಸಲಾಗಿದೆ.