ಬೆಂಗಳೂರು: ಪವರ್ ಸ್ಟಾರ್ ಪುನೀತ್ ನಟನೆಯ ‘ಗಂಧದಗುಡಿ’ ಚಿತ್ರ ವಿಶಿಷ್ಟ ದಾಖಲೆ ಬರೆದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ‘ಪುನೀತ್ ಪವರ್’ ಜೋರಾಗಿದೆ. ಪುನೀತ್ ರಾಜ್ಕುಮಾರ್ ಕನಸಿಗೆ ಪ್ರೇಕ್ಷಕ ಉಘೇ ಎಂದಿದ್ದು, ಎರಡೇ ದಿನಗಳಲ್ಲಿ ಹೊಸ ರೆಕಾರ್ಡ್ ಬರೆದ ‘ಗಂಧದಗುಡಿ’, 7.50 ಕೋಟಿ ರೂಪಾಯಿಗೂ ಹೆಚ್ಚು ಬಾಕ್ಸ್ ಆಫೀಸ್ ಗಳಿಸಿದೆ.
ಅಪ್ಪು ಕಮರ್ಷಿಯಲ್ ಓಪನಿಂಗ್ ಕಾಪಾಡಿಕೊಂಡ ಚಿತ್ರ, ಮುಂಗಡ ಬುಕಿಂಗ್ನಲ್ಲೂ 1 ಕೋಟಿ ಗಳಿಸಿತ್ತು. ಭಾನುವಾರವೂ ಗಂಧದ ಗುಡಿ ದಾಖಲೆ ಬರೆಯೋ ವಿಶ್ವಾಸವಿದ್ದು, ಮೂರೇ ದಿನಗಳಲ್ಲಿ 10 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಅಪ್ಪು ಕೊನೆಯದಾಗಿ ಕಾಣಿಸಿಕೊಂಡಿರುವ ಗಂಧದಗುಡಿ’ ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಪ್ರೀತಿಯ ನಟನ ಸಿನಿಮಾ ಗೆ ಫಿದಾ ಆಗಿದ್ದಾರೆ.