ನವದೆಹಲಿ: ದೇಶದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಯ ವಿಚಾರ ಹೆಚ್ಚು ಚರ್ಚಿತವಾಗುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೊಸ ವಿಷಯವೊಂದನ್ನ ಪ್ರಸ್ತಾಪಿಸಿ ರಾಜ್ಯಗಳ ಮುಂದಿಟ್ಟಿದ್ದಾರೆ. ರಾಜ್ಯಗಳ ಗೃಹ ಮಂತ್ರಿಗಳ ಚಿಂತನ್ ಶಿವಿರ್ ಉದ್ದೇಶಿಸಿ ವಿಡಿಯೊ ಸಂವಾದದಲ್ಲಿ ಮಾತನಾಡಿದ ಪ್ರಧಾನಿ, ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ಬರಬಹುದು ಎಂದು ಹೇಳಿದ್ದಾರೆ.
ಪೊಲೀಸರಿಗೆ ಒಂದು ರಾಷ್ಟ್ರ ಒಂದು ಸಮವಸ್ತ್ರ ಬರಬಹುದು. ಆದರೆ ಅದು ಈಗಲೇ ಆಗಬೇಕೆಂದೇನಿಲ್ಲ. ಅದಕ್ಕೆ 5, 50 ಅಥವಾ 100 ವರ್ಷಗಳು ತೆಗೆದುಕೊಳ್ಳಬಹುದು, ಆದರೆ ನಾವು ಯೋಚಿಸೋಣ” ಎಂದರು. ಇದು ಕೇವಲ ಸಲಹೆಯಷ್ಟೇ. ಅದನ್ನು ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ. ಪೊಲೀಸರಿಗೆ ಒಂದು ರಾಷ್ಟ್ರ ಒಂದು ಸಮವಸ್ತ್ರ ನೀತಿ ಜಾರಿಗೆ ತಂದರೆ ಉತ್ತಮ ಎಂದು ಸಲಹೆ ನೀಡಿದರು.