ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಮಾಸ್ಕೋದಲ್ಲಿ ನಡೆದ ವಾರ್ಷಿಕ ವಾಲ್ಡೈ ಚರ್ಚೆಯಲ್ಲಿ ಅವರು ಮಾತನಾಡಿ ನರೇಂದ್ರ ಮೋದಿ ಯಾವುದೇ ಒತ್ತಡಗಳ ನಡುವೆ ತಮ್ಮ ದೇಶ ಮತ್ತು ಜನರ ಹಿತಾಸಕ್ತಿಯಲ್ಲಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಲು ಸಮರ್ಥರಾಗಿರುವ ವಿಶ್ವದ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಶ್ಲಾಘಿಸಿದರು.
ಮೋದಿ ಅವರು ಸ್ವತಂತ್ರ ವಿದೇಶಾಂಗ ನೀತಿ ಪಾಲಿಸುತ್ತಾರೆ, ಅವರ ನಾಯಕತ್ವದಲ್ಲಿ ಭಾರತದಲ್ಲಿ ಮಹತ್ವದ ಕಾರ್ಯಗಳಾಗಿವೆ, ಅವರು ದೇಶಭಕ್ತ ಎಂದು ಪುಟಿನ್ ಕೊಂಡಾಡಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಕಲ್ಪನೆಯು ಆರ್ಥಿಕವಾಗಿ ಪ್ರಾಮುಖ್ಯತೆ ಪಡೆದಿದೆ. ಭವಿಷ್ಯ ಭಾರತದ್ದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.