ಮಂಡ್ಯ: ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕುಂದೂರು ಬೆಟ್ಟದ ಮೇಲೆ ಸ್ವತಃ 16 ಕೆರೆಗಳನ್ನು ನಿರ್ಮಾಣ ಮಾಡಿ ಅಂತರ್ಜಲ ಹೆಚ್ಚಳಕ್ಕೆ ಕಾರಣರಾಗಿ ಆಧುನಿಕ ಭಗೀರಥ ಎಂದೇ ಖ್ಯಾತಿಯನ್ನು ಪಡೆದಿದ್ದರು.
ಮಳವಳ್ಳಿ ತಾಲೂಕಿನ ದಾಸದೊಡ್ಡಿಯವರಾದ ಕಾಮೇಗೌಡ, ವೃತ್ತಿಯಲ್ಲಿ ಕುರಿಗಾಹಿ. ಜೊತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಕಾಳಜಿಯನ್ನು ಸಹ ಮೆರೆದಿದ್ದರು. ಇವರ ಸಾಧನೆಯನ್ನ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು.
ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ರೈತ 80 ವರ್ಷದ ಕಾಮೇಗೌಡರ ಕೆಲಸ ಎಲ್ಲರಿಗೂ ಅಚ್ಚರಿ ತರುತ್ತದೆ. ಅವರು ತಮ್ಮ ಕುರಿಸಾಗಣಿಕೆ ಜೊತೆಗೆ ಜಿಲ್ಲೆಯಲ್ಲಿ ಕೆರೆಗಳನ್ನು ನಿರ್ಮಿಸಿ ಜಲಸಂಕ್ಷಣೆಯಲ್ಲಿ ತೊಡಗಿಕೊಂಡಿದ್ದರಿ. ಅವರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಲ್ಲ. ಆದರೆ, ಅವರ ಪ್ರಯತ್ನ ಬಹಳ ದೊಡ್ಡದು ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಜ್ಯೋತ್ಸವ ಸೇರದಂತೆ ಹಲವು ಪ್ರಶಸ್ತಿಗಳನ್ನು ಕಾಮೇಗೌಡ ಪಡೆದುಕೊಂಡಿದ್ದರು.