ವಾರಣಾಸಿ: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ವೈಜ್ನಾನಿಕ ಪರೀಕ್ಷೆಯ ಕುರಿತು ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ವಾರಣಾಸಿ ಜಿಲ್ಲಾ ಹೈಕೋರ್ಟ್ ಪ್ರಕಟಿಸಿದ್ದು, ನ್ಯಾ. ಎ. ಕೆ ವಿಶ್ವೇಶ್ ಅವರು ಕಾರ್ಬನ್ ಡೇಟಿಂಗ್ ಪರೀಕ್ಷೆಯ ಅನುಮತಿಯನ್ನು ನಿರಾಕರಿಸಿ ತೀರ್ಪು ನೀಡಿದ್ದಾರೆ. ಇದರಿಂದ ಹಿಂದು ಪರ ಅರ್ಜಿದಾರರಿಗೆ ದೊಡ್ಡ ಹಿನ್ನಡೆಯಾಗಿದೆ.
ಕಾರ್ಬನ್ ಡೇಟಿಂಗ್ ಪರೀಕ್ಷೆಯಿಂದ ಪುರಾತನ ವಸ್ತುಗಳ ಕಾಲಮಾನ, ಕಾಲಘಟ್ಟವನ್ನು ನಿಖರವಾಗಿ ನಿರ್ಣಯ ತಿಳಿಯಬಹುದಾಗಿದೆ. ಆಯಾ ವಸ್ತುವಿನ ಮೇಲೆ ಇರುವ ಕಾರ್ಬನ್ ಆಧರಿಸಿ ನಡೆಯುವ ಪರೀಕ್ಷೆ ಇದಾಗಿದ್ದು, ಈ ಪರೀಕ್ಷೆ ನಡೆಸಿದ ಬಳಿಕ ವಸ್ತುವಿನ ಕಾಲಮಾನವನ್ನು ನಿರ್ಧರಿಸಲಾಗುತ್ತದೆ. ಅಂದಾಜು 50 ಸಾವಿರ ವರ್ಷಗಳವರೆಗಿನ ವಸ್ತುಗಳ ಕಾಲಮಾನ ಈ ಪರೀಕ್ಷೆಯಿಂದ ತಿಳಿಯಬಹುದಾಗಿದೆ.