ತೆಲಂಗಾಣ: ಹೂಡಿಕೆಗೆ ಸಂಬಂಧಿಸಿದ ಆ್ಯಪ್ ಬಳಸಿ 903 ಕೋಟಿ ರೂ. ವಂಚಿಸಿದ ಪ್ರಕರಣವನ್ನು ಭೇದಿಸಿದ ಪೊಲೀಸರು ಚೀನಾ ಪ್ರಜೆ ಸೇರಿ 10 ಜನರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೈದರಾಬಾದ್ ನಗರ ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್ ನಗರ ಸೈಬರ್ ಕ್ರೈಂ ವಿಭಾಗವು ಈ ಹೂಡಿಕೆ ವಂಚನೆ ಪ್ರಕರಣವನ್ನು ಭೇದಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ನಗರ ಪೊಲೀಸರು ಇ.ಡಿ ಮತ್ತು ಡಿಆರ್‌ಐನ ಸಮನ್ವಯದೊಂದಿಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಸಿ. ವಿ. ಆನಂದ್ ತಿಳಿಸಿದ್ದಾರೆ.