ಬೆಂಗಳೂರು: 67 ನೇ ಸಾಲಿನ ಫಿಲ್ಮ್‌ಫೇರ್ ಸಮಾರಂಭ ಬೆಂಗಳೂರಿನ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ಅದ್ದೂರಿಯಾಗಿ ನಡೆದಿದೆ. ಭಾನುವಾರ ನಡೆದ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಾಯಳಂ ಸಿನಿಮಾ ನಟ, ನಟಿ, ನಿರ್ದೇಶಕರು ಹಾಗೂ ಇನ್ನಿತರು ಭಾಗಿಯಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೀವಮಾನ ಸಾಧನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ನೀಡಲಾಗಿದೆ.
ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯು ಬಡವ ರಾಸ್ಕಲ್ ಸಿನಿಮಾದ ಉತ್ತಮ ಅಭಿನಯಕ್ಕೆ ಧನಂಜಯ್ ಪಾಲಾಗಿದೆ. ಇನ್ನು ಅತ್ಯುತ್ತಮ ನಟಿ ಪ್ರಶಸ್ತಿಯು ಆಕ್ಟ್ 1978 ಸಿನಿಮಾದ ಉತ್ತಮ ನಟನೆಗೆ ಯಜ್ಞಾ ಶೆಟ್ಟಿ ಪಡೆದಿದ್ದಾರೆ. ಇನ್ನು ಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ರಾಜ್ ಬಿ. ಶೆಟ್ಟಿಗೆ ನೀಡಲಾಗಿದೆ.