ವೃತ್ತಿಬದುಕಿನ 25 ನೇ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ.!

ಮಲೇಷ್ಯಾ: ಪಂಕಜ್‌ ಅಡ್ವಾಣಿ ತಮ್ಮ ವೃತ್ತಿಬದುಕಿನ 25 ನೇ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಿಲಿಯಾರ್ಡ್ಸ್ 150 ಅಪ್‌ ವಿಭಾಗದ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತದ ಸೌರವ್‌ ಕೊಠಾರಿ ವಿರುದ್ಧ 4-0 ಅಂತರದಲ್ಲಿ ಗೆದ್ದು ಸಾಧನೆ ಮಾಡಿದ್ದಾರೆ.

ಅಡ್ವಾಣಿ ಬೆಸ್ಟ್‌ ಆಫ್‌ ಸೆವೆನ್‌ ನ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ, ಸತತ 5 ನೇ ವಿಶ್ವ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ. ಅಲ್ಲದೇ ಈ ವರ್ಷ ಆಡಿರುವ ಎಲ್ಲಾ ಟೂರ್ನಿಗಳಲ್ಲೂ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 12 ವರ್ಷದ ಹಿಂದೆ ಕತಾರ್‌ನಲ್ಲಿ ಐಬಿಎಸ್‌ಎಫ್‌ 6-ರೆಡ್‌ ಸ್ನೂಕರ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಪಂಕಜ್‌ ಇದೀಗ ಮತ್ತೊಂದು ಚಿನ್ನ ಜಯಿಸಿದ್ದಾರೆ. ಭಾರತದವರೇ ಆದ ಎಸ್‌. ಶ್ರೀಕೃಷ್ಣ ಕಂಚಿನ ಪದಕ ಜಯಿಸಿದರು.