ಪುತ್ತೂರಿನ ಸಂದೀಪ್ ಉನ್ನಿಕೃಷ್ಣನ್ ವೃತ್ತಕ್ಕೆ ಹಸಿರು ಬಟ್ಟೆ ಹೊದಿಕೆ: ಹಿಂದೂ ಪರ ಸಂಘಟನೆಗಳಿಂದ ವಿರೋಧ

ಮಂಗಳೂರು: ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಇರುವ ಸಂದೀಪ್ ಉನ್ನಿಕೃಷ್ಣನ್ ವೃತ್ತಕ್ಕೆ ಹಸಿರು ಬಟ್ಟೆ ಹೊದಿಕೆ ಮಾಡಿರುವುದಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಈದ್ ಮಿಲಾದ್ ಹಬ್ಬದ ಹಿನ್ನೆಲೆ ವೃತ್ತಕ್ಕೆ ಹಸಿರು ಬಟ್ಟೆ ಹೊದಿಕೆಯನ್ನು ಮಾಡಲಾಗಿತ್ತು. ವೀರ ಸೈನಿಕನ ಹೆಸರಿನ ವೃತ್ತಕ್ಕೆ ಬಟ್ಟೆ ಮತ್ತು ಹಸಿರು ಬಾವುಟ ಹಾಕಿದ್ದಕ್ಕೆ ಹಿಂದೂ ಸಂಘಟನೆಗಳು ವಿರೋಧಿಸಿ, ಅದನ್ನು ತೆರವು ಮಾಡುವಂತೆ ಆಗ್ರಹಿಸಿದ್ದಾರೆ.

ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವ ಮೊದಲೇ ಪೊಲೀಸರು ಹಸಿರು ಬಟ್ಟೆ ತೆರವು ಮಾಡಿಸಿದ್ದಾರೆ. ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.