ಭಾರತೀಯ ವಾಯುಪಡೆಗೆ ಮಹಿಳಾ ಅಗ್ನಿವೀರರ ನೇಮಕ.!

ಚಂಡೀಗಢ: ಮುಂದಿನ ವರ್ಷ ಭಾರತೀಯ ವಾಯುಪಡೆಗೆ ಮಹಿಳಾ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ.

ಭಾರತೀಯ ವಾಯುಪಡೆಯ 90 ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೌಧರಿ ಈ ಮಹತ್ತರ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳಿಗಾಗಿ ವೆಪನ್ ಸಿಸ್ಟಂ ಬ್ರಾಂಚ್ ತೆರೆಯಲು ಸರ್ಕಾರವು ಅನುಮೋದನೆ ನೀಡಿದೆ ಎಂದು ಹೇಳಿದರು.