ಬೆಂಗಳೂರು: ಕ್ರಿಕೆಟ್ ಕಾಮಿಂಟ್ರಿಯನ್ನು ಮಾಮೂಲಿಯಾಗಿ ಇಂಗ್ಲಿಷ್, ಕನ್ನಡ, ಹಿಂದಿಯಲ್ಲಿ ಕೇಳಿರುತ್ತೇವೆ. ವಿಶೇಷ ಅಂದ್ರೆ ರಾಜಧಾನಿಯ ಕನ್ನಡಿಗರೊಬ್ಬರು ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟ್ರಿ ಕೊಟ್ಟಿರುವ ವಿಡಿಯೋ ಪ್ರಧಾನಿಯವನ್ನು ಸಹ ತನ್ನತ್ತ ಆಕರ್ಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಈ ಗಲ್ಲಿ ಕ್ರಿಕೆಟ್ ನ ಸಂಸ್ಕೃತ ಕಾಮೆಂಟರಿಯನ್ನು ಇಷ್ಟಪಟ್ಟು ಟ್ವಿಟರ್ ನಲ್ಲಿ ರೀ ಟ್ವಿಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ವಠಾರ ಆವರಣದಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುವಾಗ ಸಂಸ್ಕೃತ ವಿದ್ವಾಂಸ ಲಕ್ಷ್ಮೀನಾರಾಯಣ್ ಸಂಸ್ಕೃತದಲ್ಲಿ ಕಾಮೆಂಟರಿ ಕೊಟ್ಟ ವಿಡಿಯೋ ಎಲ್ಲೆಡೆ ತುಂಬಾ ವೈರಲ್ ಆಗಿದೆ. ಆ ವಿಡಿಯೋವನ್ನ ಸಂಸ್ಕೃತ ಮತ್ತು ಕ್ರಿಕೆಟ್ ಎಂದು ಬರೆದುಕೊಂಡು ಲಕ್ಷ್ಮೀನಾರಾಯಣ್ ಅವರು ಟ್ವೀಟ್ ಮಾಡಿದ್ದರು.
ಮೋದಿ ಈ ವಿಡಿಯೋ ರೀಟ್ವಿಟ್ ಮಾಡಿದ್ದ ಪರಿಣಾಮ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೆ ಲಕ್ಷಾಂತರ ಮಂದಿ ವಿಡಿಯೋ ನೋಡಿ ಶೇರ್ ಮಾಡಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.