ಉದ್ಯೋಗ ಸೃಷ್ಟಿ ಸರ್ಕಾರದ ಕೆಲಸ ಮಾತ್ರವಲ್ಲ ಎಲ್ಲರಿಗೂ ಸರ್ಕಾರಿ ಕೆಲಸವೇ ಬೇಕು – ಮೋಹನ್ ಭಾಗವತ್ ಟೀಕೆ

ನಾಗ್ಪುರ: ದೇಶದಲ್ಲಿ ಉದ್ಯೋಗ ಸೃಷ್ಟಿ ಕೇವಲ ಸರ್ಕಾರದ ಹೊಣೆ ಮಾತ್ರವಲ್ಲ. ಎಲ್ಲರಿಗೂ ಸರ್ಕಾರಿ ಕೆಲಸವೇ ಬೇಕಾಗಿದೆ ಎಂದು ಆರ್​​ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ನಾಗ್ಪುರದ ಆರ್​​ಎಸ್ಎಸ್ ಕಚೇರಿಯಲ್ಲಿ ದಸರಾ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಕೆಲಸ ಕೇವಲ 20 ರಿಂದ 30 ರಷ್ಟು ಜನರಿಗೆ ಮಾತ್ರ ಸಿಗಲು ಸಾಧ್ಯ. ನಾವೇ ಕೆಲಸವನ್ನ ಸೃಷ್ಟಿ ಮಾಡಬೇಕಾಗಿದೆ. ಚೀನಾ ನಮ್ಮ ವಿರೋಧಿ, ಆ ದೇಶಕ್ಕೆ ಈಗ ವಯಸ್ಸಾಗಿದೆ. ಆದರೆ ಭಾರತ ಹಾಗಲ್ಲ. ಇನ್ನೂ ಮೂವತ್ತು ವರ್ಷ ಯುವ ದೇಶವಾಗಿರಲಿದೆ. ಚೀನಾದಲ್ಲಿ ಜನಸಂಖ್ಯೆಯನ್ನ ನಿಯಂತ್ರಣಕ್ಕೆ ತಂದರು. ಧರ್ಮ ಆಧಾರಿತ ಅಸಮತೋಲನ ನಂತರ ಮತ್ತೆ ಎರಡು ಮಕ್ಕಳ ಹೆರೋದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲಿ ಸರ್ವಾಧಿಕಾರ ಇದೆ, ಎಲ್ಲವೂ ನಡೆಯುತ್ತದೆ. ನಾವು ಈ ಬಗ್ಗೆ ಸಮಗ್ರವಾದ ನೀತಿಯನ್ನ ತರಬೇಕಾಗಿದೆ. ಭಾರತಕ್ಕೆ ಜನಸಂಖ್ಯೆ ನಿಯಂತ್ರಣ ಕಾನೂನು ಅಗತ್ಯವಿದೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ರೆ ಧರ್ಮ ಆಧಾರಿತ ಅಸಮತೋಲನ ಮತ್ತು ಬಲವಂತದ ಮತಾಂತರದಂತಹ ವಿಷಯಗಳಲ್ಲಿ ದೇಶವು ವಿಭಜನೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.