ಜೆಡಿಎಸ್ ಗೂಂಡಾಗಳೇ ಚನ್ನಪಟ್ಟಣದಲ್ಲಿ ನಡೆದ ಗಲಾಟೆಗೆ ಕಾರಣ – ಸಿ. ಪಿ ಯೋಗೇಶ್ವರ್

ರಾಮನಗರ: ಜೆಡಿಎಸ್ ಗೂಂಡಾಗಳೇ ಚನ್ನಪಟ್ಟಣದಲ್ಲಿ ನಡೆದ ಗಲಾಟೆಗೆ ಕಾರಣ. ಇದು ಕುಮಾರಸ್ವಾಮಿ ರಾಜಕೀಯ ಅಧಃಪತನಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಸಿ. ಪಿ ಯೋಗೇಶ್ವರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಐದಾರು ಕಾರುಗಳಲ್ಲಿ ಹೊರಗಿನಿಂದ ಬಂದವರು ನನಗೆ ಮುತ್ತಿಗೆ ಹಾಕಿ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಹೀಗೆ ಹೊರಗಿನಿಂದ ಕರೆಸಿ ಗಲಾಟೆ ಮಾಡಿಸುವುದು ಕುಮಾರಸ್ವಾಮಿಗೆ ಶೋಭೆಯಲ್ಲ. ಅಲ್ಲದೇ ಕುಮಾರಸ್ವಾಮಿ ನಡೆಗೆ ಬೇಸತ್ತು ಚನ್ನಪಟ್ಟಣದಲ್ಲಿ  ಜೆಡಿಎಸ್ ನ ಬಹುತೇಕ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ ಎಂದು ಎಂದು ಯೋಗೇಶ್ವರ್ ಹೇಳಿದರು.