ಕೊಟ್ಟಿಗೆಗೆ ನುಗ್ಗಿ ಆಕಳು ಕರು ತಿಂದ ಚಿರತೆ.! ಬೆಚ್ಚಿಬಿದ್ದ ಗ್ರಾಮಸ್ಥರು.!

ಹಾವೇರಿ: ಚಿರತೆಯೊಂದು ದನದ ಕೊಟ್ಟಿಗೆಗೆ ನುಗ್ಗಿ ಆಕಳು ಕರುವನ್ನು ತಿಂದು ಹಾಕಿರೋ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ನಾಗವಂದ ಗ್ರಾಮದಲ್ಲಿ ನಡೆದಿದೆ. ರಾತ್ರಿ ವೇಳೆ ಗ್ರಾಮದ ಹೊರವಲಯದಲ್ಲಿರೋ ರೈತ ಹನುಮಂತಗೌಡ ಪಾಟೀಲ ಎಂಬುವರ ಮನೆಗೆ ನುಗ್ಗಿದ್ದ ಚಿರತೆ, ದನದ ಕೊಟ್ಟಿಗೆಯಲ್ಲಿದ್ದ ಆಕಳು ಕರುವನ್ನು ಅರ್ಧಂಬರ್ಧ ತಿಂದು ಪರಾರಿ ಆಗಿದೆ.

ರಟ್ಟೀಹಳ್ಳಿ ತಾಲೂಕಿನಲ್ಲಿ ಆಗಾಗ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಲೆ‌ ಇವೆ. ಚಿರತೆ ದಾಳಿಯಿಂದ ನಾಗವಂದ ಸೇರಿದಂತೆ ತಾಲೂಕಿನ‌ ಹಲವು ಗ್ರಾಮಗಳ ಜನರು ಆತಂಕದಲ್ಲಿದ್ದಾರೆ. ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟು ಬರಬೇಕಿದೆ. ಅಲ್ಲದೇ ಚಿರತೆ ದಾಳಿಯಿಂದ ಕುರಿಗಳು, ಹಸು ಕಳೆದುಕೊಂಡು ಹಾನಿ ಅನುಭವಿಸ್ತಿರೋ ರೈತರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.