ರಾಯಚೂರು: ನಾವೂ ಬೇಡೋಕೆ ಹೋಗ್ತಿದಿವಿ, ಕಾಂಗ್ರೆಸ್ ನವರು ಜೋಡೋ ಭಾರತ್ ಅಂತ ಬೇಡೋಕೆ ಹೋಗ್ತಿದ್ದಾರೆ. ನಾವು ಕಾರ್ಯಕ್ರಮ ಇಟ್ಕೊಂಡು ಹೋಗ್ತಿದಿವಿ. ಅವರು 20%,40% ಪರ್ಸಂಟೇಜ್ ಮೇಲೆ ಹೋಗ್ತಿದ್ದಾರೆ. ಅವರಲ್ಲಿ ಕೆಲವರು ಜೈಲಲ್ಲಿದ್ದಾರೆ, ಕೆಲವರೂ ಬೇಲ್ ನಲ್ಲಿದ್ದಾರೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ
ನಮಗೆ ಜೈಲು ಇಲ್ಲ, ಬೇಲೂ ಇಲ್ಲ ಕಪ್ಪ ಕಾಣಿಕೆ ಕೊಡೊ ಹಾಗೇ ಇಲ್ಲ. ಮೋದಿ, ಸೋನಿಯಾ ನೋಡಿ ಅಂತ ಹೇಳಲ್ಲ, ಬಾಂಬೆ ತಮಾಷೆ ನಾವೂ ತೋರಿಸಲ್ಲ ಎಂದರು. ಕಾಂಗ್ರೆಸ್‌ಗೆ ಅಧ್ಯಕ್ಷರನ್ನೇ ಮಾಡಲಾಗುತ್ತಿಲ್ಲ. ಕಾಂಗ್ರೆಸ್ ಜೋಡೊ ಅಲ್ಲ, ತೋಡೊ ಅಷ್ಟೆ. ನಮಗೆ ಬಿ ಟೀಂ ಅಂತಿದ್ರೂ, ಆದ್ರೀಗ ಕಾಂಗ್ರೆಸ್ ಬಿಜೆಪಿ ಬಿ ಟೀಂ. ಬಿಎಸ್ ವೈ ಸಿಎಂ ಮಾಡಿದ್ದೇ ಕಾಂಗ್ರೆಸ್ ಅಂತ ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಸಿಎಂ ಇಬ್ರಾಹಿಂ
ಹಾಳೂರಿಗೆ ಉಳಿದೋನೇ ಗೌಡ ಎಂದು ಗೇಲಿ ಮಾಡಿದರು. ಪಿಎಫ್ಐ ಗೆ ಐದು ವರ್ಷಕ್ಕೆ ಡಿವೋರ್ಸ್ ಕೊಟ್ಟಿದ್ದಾರೆ. ಐದು ವರ್ಷ ಆದ್ಮೇಲೆ ಏನ್ಮಾಡ್ತಾರೆ, ಸರಿಹೋಗ್ತಾರಾ, ಇವ್ರೇನು ಸರ್ಕಾರ ನಡೆಸ್ತಿದ್ದಾರಾ ಎಂದು ಪ್ರಶ್ನಿಸಿದರು. ಪಿಎಫ್ಐ ಮೇಲೆ ಆರೋಪ ಇದ್ರೆ ಕಾನೂನು ಇದೆ. ಆರೋಪ ಸಾಬೀತಾದ್ರೆ ಗಲ್ಲಿಗೇರಿಸಿ, ಬ್ಯಾನ್ ಮಾಡೋದಕ್ಕೆ ಕಾರಣ ಬೇಕಿದೆ ಅದನ್ನ ತಿಳಿಸಿ ಅಂತ ಸಿಎಂ ಇಬ್ರಾಹಿಂ ಪ್ರಶ್ನಿಸಿದರು.
ವಿರೋಧ ಪಕ್ಷವೇ ಇಲ್ಲ, ರಾಹುಲ್ ಗಾಂಧಿ ಎಳಸು ಅದಕ್ಕೆ ಕೆಸಿ ಆರ್, ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್ ಸೇರಿ 2024ಕ್ಕೆ ಒಂದು ಪ್ಲಾನ್ ಮಾಡ್ತಿದ್ದಾರೆ ಅಂತ ಸಿಎಂ ಇಬ್ರಾಹಿಂ ಹೇಳಿದರು. ಕಾಂಗ್ರೆಸ್ ಬಿಜೆಪಿ ನಡುವೆ ಪೈಪೋಟಿ ನಡಿತಿದೆ, ನಾವು ಅವರಿಗಿಂತ ವಿಭಿನ್ನವಾಗಿ ಹೋಗುತ್ತೇವೆ. ಪಂಚರತ್ನ ಜಾರಿಗೆ ತರ್ತೇವೆ, ಆ ಯೋಜನೆ ಈಗ ರಾಜ್ಯದ ಜನರ ಮುಂದೆ ಇಟ್ಟಿದ್ದೇವೆ. ಭಯ, ಹಸಿವು ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ನಮ್ಮದು. ನಾವು ಕೆಲಸ ಮಾಡದೇ ಇದ್ರೆ ಪಕ್ಷ ವಿಸರ್ಜನೆ ಮಾಡುತ್ತೇವೆ ಎಂದು
ಸಿಎಂ ಇಬ್ರಾಹಿಂ ವಾಗ್ದಾನ ಮಾಡಿದರು.