ಟಿ20 ಹೊಸತಂಡಗಳ ಶ್ರೇಯಾಂಕದಲ್ಲಿ 2 ನೇ ಸ್ಥಾನಕ್ಕೇರಿದ ಟೀಂ ಇಂಡಿಯಾ

ನವದೆಹಲಿ: ಐಸಿಸಿಯು ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಹೊಸ ತಂಡಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಮೂರು ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಭಾರತ ತಂಡವು ರ‍್ಯಾಂಕಿಗ್ ನಲ್ಲಿ 2 ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ವಿರುದ್ಧ 7 ಅಂಕಗಳ ಮುನ್ನಡೆ ಸಾಧಿಸಿದೆ.

ಮೊದಲ ಟಿ20 ಸೋಲಿನ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯವನ್ನ ಭಾರತ ತಂಡ ಗೆದ್ದು ಸರಣಿಯನ್ನು ಸಮಬಲಗೊಳಿಸಿತ್ತು. ಅಲ್ಲದೇ ಹೈದರಾಬಾದ್ ನಲ್ಲಿ ನಡೆದ ಮೂರನೇ ಟಿ 20 ಪಂದ್ಯವನ್ನು ಸಹ ಗೆದ್ದಿತು. ಇದರಿಂದ ಭಾರತ 1 ಪಾಯಿಂಟ್ ಗಳಿಸಿ, 268 ಅಂಕಗಳನ್ನ ಪಡೆದು, ಇಂಗ್ಲೆಂಡ್ ನು ಹಿಂದಿಕ್ಕಿದೆ. ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಆರನೇ ಸ್ಥಾನಕ್ಕೆ ಕುಸಿದಿದೆ.