ಸ್ಕೂಟಿ – ಪಿಕಪ್ ಮುಖಾಮುಖಿ ಡಿಕ್ಕಿ: ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

ಸಿದ್ದಾಪುರ: ಸ್ಕೂಟಿ ಹಾಗೂ ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿದ್ದಾಪುರ – ಶಿರಸಿ ರಸ್ತೆಯ ಕಾಳೇನಳ್ಳಿ ಗ್ರಾಮದ ಬಳಿ ನಡೆದಿದೆ. ದೊಡ್ಡಜಡ್ಡಿ ಗ್ರಾಮದ ನಿವಾಸಿ ಹರೀಶ ರಾಮಚಂದ್ರ ನಾಯ್ಕ (24) ಮೃತ ಬೈಕ್ ಸವಾರ.

ಶಿರಸಿಗೆ ಹೊರಟಿದ್ದ ಯುವಕನ ಸ್ಕೂಟಿಗೆ ಎದುರಿನಿಂದ ಬಂದ ಪಿಕ್‌ಅಪ್ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.