ಬೆಂಗಳೂರು: ‘ನಾವು ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ. ಅರೆಸ್ಟ್ ಆಗಲೂ ತಯಾರಿದ್ದೇವೆ. ಸಿಎಂ ಬೊಮ್ಮಾಯಿಯವರಿಗೆ ಧಮ್, ತಾಕತ್ ಇದ್ರೆ ನಮ್ಮನ್ನು ಅರೆಸ್ಟ್ ಮಾಡಲಿ’ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್ ನಮ್ಮ ಕಾರ್ಯಕರ್ತರನ್ನು ಬಂಧನ ಮಾಡಿದ್ದಾರೆ. ಧಮ್, ತಾಕತ್ತು ಇದ್ದರೆ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಿ ನೋಡೋಣ ಎಂದು ಸವಾಲೆಸೆದರು. ಇಷ್ಟೊಂದು ಭ್ರಷ್ಟಾಚಾರ ದಲ್ಲಿ ಇವರು ಮುಳುಗಿದ್ದಾರೆ. ಲಿಂಗಾಯತರ ಹೆಸರು ಇಟ್ಟುಕೊಂಡು ಇವರು ಏನೇನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಇಂತಹ ವಿಚಾರಗಳಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.