ದೆಹಲಿ: ಪ್ರತಿಷ್ಠಿತ ದೆಹಲಿಯ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಡಾ. ಎಂ. ಶ್ರೀನಿವಾಸ್ ನೇಮಕಗೊಂಡಿದ್ದಾರೆ. ಇವರು ಮೂಲತಃ ಕರ್ನಾಟಕದ ಯಾದಗಿರಿಯವರಾಗಿದ್ದು ಬಳ್ಳಾರಿಯ ಏಮ್ಸ್ನಲ್ಲಿ 1984ರ ಬ್ಯಾಚ್ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಸದ್ಯ ಹೈದರಾಬಾದ್ನ ಸನತ್ನಗರದ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಆಗಿದ್ದರು.
ಇದಕ್ಕೂ ಮೊದಲು ಅವರು ದೆಹಲಿಯ ಏಮ್ಸ್ನಲ್ಲಿಯೇ ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಶ್ರೀನಿವಾಸ್ ಕಾರ್ಯ ನಿರ್ವಹಿಸಿದ್ದರು. ಇದೀಗ ಹುದ್ದೆಯನ್ನು ವಹಿಸಿಕೊಳ್ಳುವ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ಅವರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.