ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದ ಬಜರಂಗ್ ಪೂನಿಯಾ.!

ಸರ್ಬಿಯಾ: ವಿಶ್ವ ಕುಸ್ತಿ ಚಾಂಪಿಯನ್ ಶಿಪ್ 2022ರ ಅಂತಿಮ ದಿನ ಪುರುಷರ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬಜರಂಗ್ ಗೆದ್ದ 4 ನೇ ಪದಕವಾಗಿದೆ.

ಪೂನಿಯಾ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಗಾಯಗೊಂಡಿದ್ದರು. ಪಂದ್ಯದ ಆರಂಭದಲ್ಲಿ 6-0 ಅಂತರದಲ್ಲಿ ಹಿನ್ನಡೆ ಅನುಭವಿಸಿದರೂ ಬಳಿಕ ಪೋರ್ಟೊ ರಿಕೊದ ಸೆಬಾಸ್ಟಿಯನ್ ರಿವೇರಾ ವಿರುದ್ಧ ಉತ್ಸಾಹಭರಿತ ಹೋರಾಟ ನಡೆಸಿ ಕಂಚು ಗೆದ್ದಿದ್ದಾರೆ. ಪೂನಿಯಾ 2018 ರಲ್ಲಿ ಬೆಳ್ಳಿ, 2013 ಮತ್ತು 2019 ರಲ್ಲಿ ಕಂಚಿನ ಪದಕ ಗೆದ್ದು, ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅತ್ಯಂತ ಯಶಸ್ವಿ ಕುಸ್ತಿಪಟುವಾಗಿ ಹೊರ ಹೊಮ್ಮಿದ್ದರು.