ಮಹಾರಾಷ್ಟ್ರ: ರಾಯಗಡ ಜಿಲ್ಲೆಯ ದಕ್ಷಿಣದಲ್ಲಿರುವ ಅರೇಬಿಯನ್ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಿಂದ 18 ಜನರನ್ನು ಭಾರತೀಯ ಕೋಸ್ಟ್ ಗಾರ್ಡ್ ಶುಕ್ರವಾರ ರಕ್ಷಿಸಿದೆ. ಹಡಗಿನಲ್ಲಿ 17 ಭಾರತೀಯರು ಸೇರಿ ಒಬ್ಬ ಇಥಿಯೋಪಿಯನ್ ಪ್ರಜೆ ಇದ್ದರು.
ದೋಣಿ ಮುಳುಗುತ್ತಿರುವುದನ್ನು ಗಮನಿಸಿದವರು ತಕ್ಷಣ ಭಾರತೀಯ ಕೋಸ್ಟ್ ಗಾರ್ಡ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಭಾರತೀಯ ಕೋಸ್ಟ್ ಗಾರ್ಡ್ ನ ಎರಡು ಹಡಗುಗಳು ಮತ್ತು ಒಂದು ಹೆಲಿಕಾಪ್ಟರ್ ಸಂಘಟಿತ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಪ್ರಯಾಣಿಕರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ