ತಮಿಳುನಾಡು: ಪ್ರಧಾನಿ ನರೇಂದ್ರ ಮೋದಿ ನಾಳೆ 72 ವರ್ಷಕ್ಕೆ ಕಾಲಿಡುತ್ತಿದ್ದಾರೆ. ದೇಶದ ವಿವಿಧೆಡೆ ಮೋದಿ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ತಮಿಳುನಾಡಿನ ಬಿಜೆಪಿ ಘಟಕ ಭರ್ಜರಿ ಗಿಫ್ಟ್ ನೀಡಲು ಮುಂದಗಿದೆ.
ಹೌದು.! ಸೆಪ್ಟೆಂಬರ್ 17 ರಂದು ಜನಿಸಿದ ಮಗುವಿಗೆ ಚಿನ್ನದ ಉಂಗುರವನ್ನು ನೀಡುವುದಾಗಿ ತಮಿಳುನಾಡು ಬಿಜೆಪಿ ಘಟಕ ಘೋಷಿಸಿದೆ. ಪಕ್ಷವು ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದೆ ಎಂದು ರಾಜ್ಯದ ಸಚಿವ ಎಲ್ ಮುರುಗನ್ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 17 ರಂದು ಆಸ್ಪತ್ರೆಯಲ್ಲಿ 10-15 ಮಕ್ಕಳು ಜನಿಸುವ ನಿರೀಕ್ಷೆಯಿದೆ. ಪ್ರತಿ ಮಗುವಿಗೆ 2 ಗ್ರಾಂ ತೂಗುವ ಉಂಗುರವನ್ನು ನೀಡಲಾಗುತ್ತದೆ. ಅಲ್ಲದೇ ಮೋದಿಗೆ 72 ವರ್ಷವಾಗುವುದರಿಂದ 720 ಕೆಜಿ ಮೀನು ವಿತರಿಸಲಾಗುವ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದೆ. ಇದಕ್ಕಾಗಿ ಎಂ.ಕೆ.ಸ್ಟಾಲಿನ್ ಅವರ ಕ್ಷೇತ್ರವನ್ನು ಆಯ್ಕೆ ಮಾಡಲಾಗಿದೆ.