ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಸೋವಾ ವೈರಸ್.!

ಮೊಬೈಲ್ ಬಳಕೆದಾರರೇ ಎಚ್ಚರ.! ನೀವು ಸ್ಮಾರ್ಟ್ ಫೋನ್ ಗಳಿಂದಲೇ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದೀರಾ.? ಹಾಗಾದರೆ ನೀವು ಎಷ್ಟು ಎಚ್ಚರ ವಹಿಸಿದರೂ ಸಾಲದು. ನಿಮ್ಮ ಬ್ಯಾಂಕ್ ವಿವರಗಳು ಸುಲಭವಾಗಿ ಹ್ಯಾಕರ್ ಗಳಿಗೆ ಸಿಗಬಹುದು. ನಿಮ್ಮ ವಯಕ್ತಿಕ ಡಾಟಾಗಳ ಜೊತೆ ಬ್ಯಾಂಕ್ ಅಕೌಂಟ್ ಕೂಡಾ ಹ್ಯಾಕ್ ಆಗಬಹುದು. ಎಸ್.! ಭಾರತಕ್ಕೆ ಇದೀಗ ‘ಸೋವಾ’ ಎನ್ನುವ ಟ್ರೋಜನ್‌ ಕಾಲಿಟ್ಟಿದೆ. ಇದರಿಂದ ನಿಮ್ಮ ಬ್ಯಾಂಕ್ ಖಾತೆಗಳಿಗೆ ಕನ್ನ ಬೀಳಬಹುದುದು. ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ ಬಳಕೆದಾರರನ್ನು ಗುರಿಯಾಗಿಸಿ ಈ ವೈರಸ್ ದಾಳಿ ನಡೆಸುತ್ತಿದೆ.

ಹೌದು.! ಮೊಬೈಲ್ ಗಳಿಗೆ ನಿಮಗೆ ಗೊತ್ತಿಲ್ಲದಂತೇ ನುಸುಳುವ ಈ ವೈರಸ್ ಬಹಳ ಅಪಾಯಕಾರಿ. ನಿಮ್ಮ ಸ್ಮಾರ್ಟ್ ಫೋನ್ ಗಳಿಗೆ ವೈರಸ್ ಮೂಲಕ ಕನ್ನ ಹಾಕಿ ಅದರಲ್ಲಿರುವ ಅಮೂಲ್ಯ ಡೇಟಾಗಳನ್ನು ಹ್ಯಾಕ್ ಮಾಡುವುದರ ಜೊತೆಗೆ ಬ್ಯಾಂಕ್ ಖಾತೆಯನ್ನು ದೋಚಬಹುದು. ಒಂದು ಬಾರಿ ನಿಮ್ಮ ಮೊಬೈಲ್ ಗೆ ಈ ವೈರಸ್ ಎಂಟ್ರಿ ಕೊಟ್ಟರೆ ಅನ್ ಇನ್ಸ್ಟಾಲ್ ಮಾಡುವುದೂ ಕೂಡಾ ಬಹಳ ಕಷ್ಟ. ಈ ಬಗ್ಗೆ ಜಾಗರೂಕರಾಗಿರುವಂತೆ ಕೇಂದ್ರ ಸರಕಾರದ ಸೈಬರ್‌ ಸೆಕ್ಯುರಿಟಿ ಏಜೆನ್ಸಿ ಸಲಹೆ ನೀಡಿದೆ.

ಹಲವು ವೈರಸ್ ಗಳು ಮೊಬೈಲ್ ಗಳಿಗೆ ಬರುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಅದರಂತೆ ಈ ಸೋವಾ ವೈರಸ್ ಕೂಡಾ ಬಹಳ ಡೇಂಜರ್. ಯಾವುದಾದರೂ ಲಿಂಕ್ ಗಳ ಮೂಲಕ ಈ ವೈರಸ್ ಸ್ಮಾರ್ಟ್ ಫೋನ್ ಗಳಿಗೆ ಬರುವ ಸಾಧ್ಯತೆ ಇದೆ. ಈ ವೈರಸ್ ಸೆಪ್ಟೆಂಬರ್ 2021 ರಲ್ಲಿ ಮೊದಲು ಕಾಣಿಸಿಕೊಂಡಿತ್ತು. ಯುಎಸ್​, ರಷ್ಯಾ ಮತ್ತು ಸ್ಪೇನ್‌ ನಂತಹ ದೇಶಗಳ ಮೇಲೆ ಗುರಿಯಾಗಿಸಲಾಗಿತ್ತು. ಆದರೆ ಇದೀಗ ಜುಲೈ 2022 ರಲ್ಲಿ ಅದು ಭಾರತ ಸೇರಿದಂತೆ ಹಲವಾರು ಇತರ ದೇಶಗಳನ್ನು ತನ್ನ ಟಾರ್ಗೆಟ್ ಪಟ್ಟಿಗೆ ಸೇರಿಸಿಕೊಂಡಿದೆ.