ಕುಂದರಗಿ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಯಲ್ಲಾಪುರ: ತಾಲೂಕಿನ ಕುಂದರಗಿ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ 160 ಜನ ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದುಕೊಂಡರು.

ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಶಿಬಿರ ಉದ್ಘಾಟಿಸಿದರು. ಗ್ರಾಮ ಒನ್ ಸೇವಾ ಕೇಂದ್ರದ ರಾಘು ಕುಂದರಗಿ ಅವರು ಸುಮಾರು 50 ಜನರಿಗೆ ಆರೋಗ್ಯ ಕಾರ್ಡ್ ಉಚಿತ ನೊಂದಣಿ ಮಾಡಿದರು. ಈ ಸಂದರ್ಭದಲ್ಲಿ ಕದಂಬ ಸಂಸ್ಥೆ ಶಿರಸಿಯ ಸುರೇಶ ಶೆಟ್ಟಿ, ಕುಂದುರ್ಗಿ ಪಿ. ಎಚ್. ಸಿಯ ಡಾ. ರಮ್ಯಶ್ರೀ, ಗ್ರಾ.ಪಂ ಸದಸ್ಯರಾದ ಗಣೇಶ ಹೆಗಡೆ, ಪ್ರಕಾಶ ನಾಯ್ಕ, ಜನಸೇವಾ ಟ್ರಸ್ಟ್ ಪ್ರಮುಖರಾದ ನಟರಾಜ ಗೌಡರ್, ಸತೀಶ ಹೆಗಡೆ, ಅರುಣಕುಮಾರ ಗೌಡರ್, ಸತೀಶ ಹೆಗಡೆ ಕುಂದುರಗಿ ಮುಂತಾದವರು ಭಾಗವಹಿಸಿದ್ದರು.