ಸಭಾಭವನ ನಿರ್ಮಾಣಕ್ಕೆ 2 ಲಕ್ಷ ರೂ. ನೀಡಿದ ಶಾಸಕ ಸುನೀಲ್ ನಾಯ್ಕ್

ಭಟ್ಕಳ: ತಾಲೂಕಿನ ಹೆಬಳೆ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ಶಾಸಕ ಸುನೀಲ ನಾಯ್ಕ 2 ಲಕ್ಷ ರೂಪಾಯಿ ವೈಯಕ್ತಿಕ ಕಾಣಿಕೆ ನೀಡಿದ್ದಾರೆ. ಈ ಹಿನ್ನೆಲೆ  ಹೆಬಳೆ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಭಾಭವನಕ್ಕೆ ಭೇಟಿ ನೀಡಿ ಆಡಳಿತ ಕಮಿಟಿಗೆ ಹಣವನ್ನು ಹಸ್ತಾಂತರಿಸಿ ದೇವಸ್ಥಾನದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವ ಬರವಸೆಯನ್ನು ನೀಡಿದ್ದಾರೆ. ಈ ವೇಳೆ ದೇವಸ್ಥಾನದ ಆಡಳಿತ ಕಮಿಟಿಯಿಂದ ಶಾಸಕ ಸುನೀಲ ನಾಯ್ಕರನ್ನು ಸನ್ಮಾನಿಸಿ ಗೌರವಿಸಿದರು.