ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 22.70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸೌಲಭ್ಯದ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ತಾಲೂಕಿನ ಕೊಪ್ಪ ಕೊಚ್ಚೂಡಿ ಕುಡಿಯುವ ನೀರಿನ ಸೌಲಭ್ಯ 20.90 ಲಕ್ಷ ರೂ ಮತ್ತು ಕೊಪ್ಪ ಕೊಚ್ಚೂಡಿ 6 ಕಿಮಿ 5.30 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದ್ದು ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಹೊನ್ನಾವರ ತಾಲೂಕಿನ ಹೆಗ್ಗೆರಿ-ಮಾಗೋಡು-ನಗರಬಸ್ತೀಕೇರಿ 3.40 ಇಂದ 20 ಕಿಮಿ ವರೆಗೆ 11.90 ಕೋಟಿ ರೂಪಾಯಿ ವೆಚ್ಚದಲ್ಲಿ ಆಯ್ದ ಭಾಗಗಳ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಇನ್ನು ಮಾಗೋಡು ಕೊಡ್ಲುಗದ್ದೆ 0 ದಿಂದ 6 ಕಿಮಿ ರಸ್ತೆ ನಿರ್ಮಾಣ 5.30 ಕೋಟಿ ನಿರ್ಮಾಣವಾಗಲಿದ್ದು ವಿವಿಧ
ಕಾಮಗಾರಿಗೆ ಶಾಸಕ ಸುನಿಲ್ ನಾಯ್ಕ್ ಚಾಲನೆ ನೀಡಿದರು.