ಭಟ್ಕಳ: ದೋಣಿ ದುರಂತದಲ್ಲಿ ಮೃತಪಟ್ಟ ಜಾಲಿಯ ಯುವಕ ನಾಗರಾಜ ರಾಮಕೃಷ್ಣ ಮೋಗೆರನ ಮನೆಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕಳೆದ ಕೆಲ ದಿನಗಳ ಹಿಂದಷ್ಟೇ ಜಾಲಿಯಿಂದ ಮೀನುಗಾರಿಕೆಗೆ ತೇರಳಿದ ವೇಳೆ ಅಲೆಯ ರಭಸಕ್ಕೆ ದೋಣಿ ಮುಳುಗಡೆಯಾಗಿ ನಾಗರಾಜ ರಾಮಕೃಷ್ಣ ಮೋಗೆರ ಸಾವನ್ನಪ್ಪಿದ್ದನು ಹಾಗೂ ದೋಣಿಯಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಹಿನ್ನೆಲೆ ಮೃತಪಟ್ಟ ಯುವಕನ ಮನೆಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಯುವಕನ ಸಾವಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.