ಸಹೋದರನಿಂದಲೇ ಅಪ್ರಾಪ್ತ ಸಹೋದರಿಯ ಮೇಲೆ ಅತ್ಯಾಚಾರ

ಬೀದರ್: 16 ವರ್ಷದ ಅಪ್ರಾಪ್ತ ಸಹೋದರಿ ಮೇಲೆ ಸಹೋದರನೇ ಅತ್ಯಾಚಾರ ಮಾಡಿದ ಘಟನೆ ಬಸವಕಲ್ಯಾಣ ತಾಲೂಕಿನ ತಾಂಡಯೊಂದರಲ್ಲಿ ನಡೆದಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಗೆ ಇಬ್ಬರು ಪತ್ನಿಯರಿದ್ದು, ಹಿರಿಯ ಪತ್ನಿಯ ಮಗನೇ ಕಿರಿಯ ಪತ್ನಿಯ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಪತಿ ಸತ್ತ ಬಳಿಕ ಬಸವಕಲ್ಯಾಣದ ಅದೇ ತಾಂಡದ ಪ್ರತ್ಯೇಕ ಮನೆಯಲ್ಲಿ ಎರಡನೇ ಪತ್ನಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು. ಮೊದಲನೇಯ ಪತ್ನಿ ಮಗ ಆಗಾಗ ಕೆಲಸಕ್ಕೆಂದು ತನ್ನ ಮನೆಗೆ ಸಹೋದರಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಗೈದಿದ್ದಾನೆ. ಜೊತೆಗೆ ಈ ವಿಷಯವನ್ನು ಯಾರಿಗೂ ಹೇಳದಂತ್ತೆ ನನ್ನ ಮಗಳಿಗೆ ಬೆದರಿಸಿದ್ದಾನೆ‌. ಇದಕ್ಕೆ ಇನ್ನಿಬ್ಬರ ಸಹಕಾರವು ಇದೆ ಎಂದು ತಾಯಿ ಮುಡಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಈ ಕುರಿತು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸಲು ಆರೋಪಿ ಸಹೋದರನನ್ನು ಬಂಧಿಸಿದ್ದಾರೆ.