ಹಾವು ಕಚ್ಚಿ ಶಾಲಾ ವಿದ್ಯಾರ್ಥಿ ಗಂಭೀರ.!

ಭಟ್ಕಳ: ಶಾಲೆಯಲ್ಲಿ ಹಾವು ಕಚ್ಚಿ 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮುರ್ಡೇಶ್ವರ ನ್ಯಾಷನಲ್ ಕಾಲನಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

5 ನೇ ತರಗತಿಯ ವಿದ್ಯಾರ್ಥಿ ಅಲ್ಫಾಝ್ ಸರ್ತಾಝ್ ಹಾವಿನ ಕಡಿತಕ್ಕೊಳಗಾದ ವಿದ್ಯಾರ್ಥಿ. ಕಿಟಕಿಯ ಹೊರಗೆ ಪೆನ್ಸಿಲ್ ಬಿದ್ದಿದ್ದು, ಅದನ್ನು ತರಲು ಹೊರಗೆ ಹೋಗುತ್ತಿದ್ದ ವೇಳೆ ಹಾವು ಬಾಲಕನ ಕಾಲಿಗೆ ಕಚ್ಚಿದೆ ಎನ್ನಲಾಗಿದೆ. ಕೂಡಲೇ ವಿದ್ಯಾರ್ಥಿಯನ್ನು ಮುರ್ಡೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಹಾವು ಕಚ್ಚಿದ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರಕಾರಿ ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.