ಮುಂಡಗೋಡ: ಪಟ್ಟಣದ ಪುಷ್ಪಾಂಜಲಿ ಮೆಡಿಕಲ್ ಶಾಪ್ ಹತ್ತಿರ ನಿಲ್ಲಿಸಿದ್ದ ಬೈಕ್ ಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬಂಕಾಪೂರ ರಸ್ತೆಯಲ್ಲಿರುವ ಪುಷ್ಪಾಂಜಲಿ ಮೆಡಿಕಲ್ ಶಾಪ್ ಹತ್ತಿರ ನಿಲ್ಲಿಸಿದ್ದ ಬೈಕ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೂಡಲೆ ಸ್ಥಳದಲ್ಲಿದ್ದ ಸಾರ್ವಜನಿಕರು ಬೈಕ್ ಗೆ ಹತ್ತಿದ ಬೆಂಕಿಯನ್ನು ನಂದಿಸಿದ್ದಾರೆ. ಆದರೂ ಬೈಕ್ ಸುಟ್ಟು ಹಾನಿಯಾಗಿದೆ.



